ಪ್ರಿಯಾಂಕ್ ಖರ್ಗೆ 
ರಾಜಕೀಯ

RSSಗೆ ಅಮೆರಿಕದಿಂದ ದೇಣಿಗೆ ಬಂದಿದ್ದು ಗೊತ್ತಿಲ್ಲವೇ..? ಪಾಕ್ ಜಪ ಮಾಡೋದು BJPಯೇ ಹೊರತು ಕಾಂಗ್ರೆಸ್ ಅಲ್ಲ: ಅಶೋಕ್'ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂಬ ಮೋಹನ್ ಭಾಗವತ್ ಅವರ ಹೇಳಿಕೆಯ ಹಿಂದೆ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶವಿದೆಯೇ..? ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವುದು ಆರ್‌ಎಸ್‌ಎಸ್‌ನವರೇ ಹೊರತು ಕಾಂಗ್ರೆಸ್‌ ಅಲ್ಲ.

ಬೆಂಗಳೂರು: ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಹೊರತುಪಡಿಸಿದರೆ ಬಿಜೆಪಿಯವರಿಗೆ ಬೇರೆ ದೇಶಗಳ ಪರಿಚಯವೇ ಇಲ್ಲ ಎಂಬಂತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಆರ್‌ಎಸ್‌ಎಸ್‌ ಅಮೆರಿಕದಿಂದ ದೇಣಿಗೆ ಪಡೆದಿರುವ ವಿಚಾರ ಅಶೋಕ್ ಅವರಿಗೆ ತಿಳಿದಿಲ್ಲವೆನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂಬ ಮೋಹನ್ ಭಾಗವತ್ ಅವರ ಹೇಳಿಕೆಯ ಹಿಂದೆ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶವಿದೆಯೇ..? ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವುದು ಆರ್‌ಎಸ್‌ಎಸ್‌ನವರೇ ಹೊರತು ಕಾಂಗ್ರೆಸ್‌ ಅಲ್ಲ, ಆರ್‌ಎಸ್‌ಎಸ್‌ ನಾಯಕರ ಹೇಳಿಕೆಗಳನ್ನಾದರೂ ಗಮನಿಸಿದ್ದರೆ ಅಶೋಕ್ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.

ಆರ್‌ಎಸ್‌ಎಸ್‌ ಶಾಖೆಗೆ ತೆರಳಿ ಕೋಲು ತಿರುಗಿಸಿಕೊಂಡು ಬರುವುದನ್ನು ಬಿಟ್ಟರೆ, ತಮ್ಮ ನಾಯಕರ ಬಗ್ಗೆ ಕನಿಷ್ಠ ತಿಳುವಳಿಕೆಯನ್ನೂ ಅಶೋಕ್‌ ಪಡೆದುಕೊಂಡಿಲ್ಲ. ಸಂಘಟನೆಯಿಂದಲೂ ಅವರಿಗೆ ಸರಿಯಾದ ತಿಳುವಳಿಕೆ ದೊರೆತಿಲ್ಲ. ದೇಶದ ಇತಿಹಾಸವಾಗಲಿ, ಆರ್‌ಎಸ್‌ಎಸ್‌ನ ಇತಿಹಾಸವಾಗಲಿ ಅಶೋಕ್ ಅವರಿಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಕಾನೂನು ಮತ್ತು ಸಂವಿಧಾನದ ಬಗ್ಗೆ ಈಗಲಾದರೂ ಆರ್‌ಎಸ್‌ಎಸ್‌ಗೆ ಅರಿವು ಮೂಡಿದೆಯಲ್ಲವೇ ಎಂದು ಪ್ರಶ್ನಿಸಿರುವ ಅವರು, ಬಿಜೆಪಿಯೇ ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿದೆ ಎಂದು ಹೇಳಿದ್ದಾರೆ.

ಚುನಾವಣಾ ಬಾಂಡ್‌ಗಳ ಅಕ್ರಮಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಬಿಜೆಪಿ ಇನ್ನೂ ಉತ್ತರಿಸಬೇಕಿದೆ. ಆ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಬಿಜೆಪಿಯವರಿಗಿದೆಯೇ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯಲ್ಲಿ ನಾಯಕರೆನಿಸಿಕೊಳ್ಳಬೇಕಾದರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಬೇಕು ಮತ್ತು ಪಾಕಿಸ್ತಾನದ ಬಗ್ಗೆ ಪದೇಪದೇ ಮಾತನಾಡಬೇಕು ಎಂದು ಈ ಹಿಂದೆ ಹೇಳಿದ್ದ ಅಶೋಕ್, ಈಗ ತಾವೂ ನಾಯಕರೆನಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2018ರ ಮಾನನಷ್ಟ ಮೊಕದ್ದಮೆ ಕೇಸ್ ವಜಾಗೊಳಿಸಿದ ಸುಲ್ತಾನ್‌ಪುರ ಕೋರ್ಟ್..!

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ: ಆ್ಯಂಬುಲೆನ್ಸ್ ಸೇರಿ ಹಲವರು ವಾಹನಗಳಿಗೆ ಡಿಕ್ಕಿ; ಕೂದಲೆಳೆ ಅಂತರದಲ್ಲಿ ವಿಪಕ್ಷ ನಾಯಕ ಪಾರು, ಹಲವರಿಗೆ ಗಾಯ..!

ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು!

ಬ್ರೆಜಿಲ್ ನಲ್ಲಿ ಟ್ರಂಪ್ ವಿರೋಧಿ ಲೂಯಿಜ್ ಇನಾಸಿಯೊ ಲುಲಾಗೆ ಮತ್ತೆ ಅಧಿಕಾರ; ನಾಲ್ಕನೇ ಬಾರಿಗೆ ಅಧ್ಯಕ್ಷ ಸ್ಥಾನ

ಭಾರತ 'ತೈಲ ಶುದ್ಧೀಕರಣದ ಸೂಪರ್ ಪವರ್' ರಾಷ್ಟ್ರವೆಂದು ಜಗತ್ತಿನ ಇತರ ರಾಷ್ಟ್ರಗಳಿಗೆ ಗೊತ್ತಾದದ್ದು ಹೇಗೆ?