ಸಿದ್ದರಾಮಯ್ಯ - ಯತ್ನಾಳ್ - ಸತೀಶ್ ಜಾರಕಿಹೊಳಿ  
ರಾಜಕೀಯ

ಸತೀಶ್ ಜಾರಕಿಹೊಳಿಗೆ ಸಿದ್ದರಾಮಯ್ಯನವ್ರ 'ಶಾಪ' ತಟ್ಟಿದೆ!: ಯತ್ನಾಳ್ ಹೊಸ 'ಬಾಂಬ್'

ಇಂದು ಬಾಗಲಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಶಾಪ ತಟ್ಟಿದೆ ಅಂತ ಅನಿಸ್ತಿದೆ ಎಂದರು.

ಬಾಗಲಕೋಟೆ: ಜಾರಿ ನಿರ್ದೇಶನಾಲಯ(ಇಡಿ)ದ ದಾಳಿಗೆ ಒಳಗಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಶಾಪ ತಟ್ಟಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಶಾಪ ತಟ್ಟಿದೆ ಅಂತ ಅನಿಸ್ತಿದೆ ಎಂದರು.

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಶಾಸಕರ ಸಹಿ ಮಾಡಿಸಿಕೊಟ್ಟವರೇ ಈ ಸತೀಶ್ ಜಾರಕಿಹೊಳಿ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೇ ಏನು ಅಭ್ಯಂತರ ಇಲ್ಲವೆಂದು 36 ಶಾಸಕರ ಸಹಿ ಮಾಡಿ ಕೊಟ್ಟವರೇ ಸತೀಶ ಜಾರಕಿಹೊಳಿ. ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್, ಜಾರಕಿಹೊಳಿ ಇವರೆಲ್ಲಾ ಹೇಳಿದ್ರು. ಆದ್ರೆ ಸಿದ್ದರಾಮಯ್ಯನವ್ರನ್ನು ಯಾವ ಕಾರಣಕ್ಕೆ ತೆಗೆದ್ರಿ ಅಂತ ಜನತೆಗೆ ಹೇಳಬೇಕಲ್ವಾ? ಹೈಕಮಾಂಡ್‌ಗೆ ಹೆಚ್ಚು ರೊಕ್ಕ ಕೊಡಲಿಲ್ಲ ಅಂತ ತೆಗೆದ್ರಾ? ಅಂತ ಯತ್ನಾಳ್ ಪ್ರಶ್ನಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ಎರಡ್ಮೂರು ತಪ್ಪು ಮಾಡಿದ್ರು‌. ಸಿದ್ದರಾಮಯ್ಯ ನವ್ರಿಗೆ ಕೈ ಕೊಟ್ಟಿದ್ದು ತಪ್ಪು. ಸಿದ್ದರಾಮಯ್ಯನವ್ರದು ದುರ್ದೈವ ಅಂದ್ರೆ ಎಷ್ಟು ನಂಬಿದ್ರಲ್ಲಾ ಅಷ್ಟು ಕೈ ಕೊಟ್ರು. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಮೂವರೂ ಕೈ ಕೊಟ್ರು ಎಂದು ಯತ್ನಾಳ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

ದಲಿತರು, ಅಲ್ಪಸಂಖ್ಯಾತರೇ ಬಿಜೆಪಿಗೆ ಸೇರಬೇಡಿ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ ಹರಿಪ್ರಸಾದ್ ಕರೆ

252 ಮದರಸಾಗಳನ್ನು ಮುಚ್ಚಲು ಪಶ್ಚಿಮ ಬಂಗಾಳ ಸರ್ಕಾರ ಆದೇಶ; 100 ಮದರಸಾಗಳಿಗೆ ಶೋ-ಕಾಸ್ ನೋಟಿಸ್!

ಇಡೀ ಸರಣಿಯಲ್ಲಿ ಒಂದೂ ಶತಕವಿಲ್ಲ; 138 ವರ್ಷಗಳ ಬಳಿಕ ಅಪರೂಪದ ರೆಕಾರ್ಡ್, ಇಂಗ್ಲೆಂಡ್‌-ಪಾಕಿಸ್ತಾನ ಹೀನಾಯ ದಾಖಲೆ!

2029ಕ್ಕೂ ಮುನ್ನ NDA ಸರ್ಕಾರವಿರುವ ಎಲ್ಲಾ 21 ರಾಜ್ಯಗಳಲ್ಲಿ UCC ಜಾರಿ: ಗೃಹ ಸಚಿವ ಅಮಿತ್ ಶಾ