ಸುಧಾಕರ್ ಮತ್ತು ಪ್ರದೀಪ್ ಈಶ್ವರ್ 
ರಾಜಕೀಯ

ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ದ ವೈರಿಗಳು: ನಂದಿ ಮೆಡಿಕಲ್ ಕಾಲೇಜು ಓಪಿಡಿ ಬ್ಲಾಕ್‌ಗೆ 'ನನ್ನ ಅಣ್ಣ ಸುಧಾಕರ್ ತಾಯಿ ಹೆಸರಿಡಿ'; ಪ್ರದೀಪ್ ಈಶ್ವರ್

ಸುಧಾಕರ್‌ ಅವರ ತಾಯಿ ಶಾಂತಮ್ಮನವರು ನನಗೂ ತಾಯಿಯಿದ್ದಂತೆ, ಅವರ ಹೆಸರು ಇಡಬೇಕು. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ ಅನುಮತಿ ಕೊಡಿಸಿ ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ: ನಂದಿ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್‌ಗೆ ಸಂಸದ ಡಾ.ಕೆ ಸುಧಾಕರ್ ತಾಯಿಯವರ ಹೆಸರಿಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ನಡೆದ ವಿಶೇಷಚೇತನ ಹಾಗೂ ಹಿರಿಯ ನಾಗರೀಕರಿಕರಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಧಾಕರ್‌ ಅವರ ತಾಯಿ ಶಾಂತಮ್ಮನವರು ನನಗೂ ತಾಯಿಯಿದ್ದಂತೆ, ಅವರ ಹೆಸರು ಇಡಬೇಕು. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ ಅನುಮತಿ ಕೊಡಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಭೈರತಿ ಸುರೇಶ್ ಹಾಗೂ ಸುಧಾಕರ್‌ ಎದುರಲ್ಲೇ ಪ್ರದೀಪ್‌ ಈಶ್ವರ್‌ ಈ ಮಾತುಗಳನ್ನಾಡಿದರು. ಚಿಕ್ಕಬಳ್ಳಾಪುರ ತಾಲೂಕು ಅರೂರು ಬಳಿ ಇರುವ ನಂದಿ ವೈದ್ಯಕೀಯ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್ ಇಂದು ಉದ್ಘಾಟನೆಗೊಂಡಿದೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.

ರಾಜಕೀಯ ಬದ್ದ ವೈರಿಗಳು ಎಂದು ಕರೆಸಿಕೊಳ್ಳುವ ಪ್ರದೀಪ್ ಈಶ್ವರ್ ಹಾಗೂ ಕೆ ಸುಧಾಕರ್ ಇಂದು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದರು. ಈ ಹಿನ್ನೆಲೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

ಈ ವೇಳೆ ಪ್ರಾರಂಭದಲ್ಲಿ ಇಬ್ಬರು ನಾಯಕರು ಭೈರತಿ ಸುರೇಶ್‌ ಅಕ್ಕ ಪಕ್ಕ ಕುಳಿತಿದ್ದರು. ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರದೀಪ್‌ ಈಶ್ವರ್‌, ಸಂಸದರು ನನ್ನ ಅಣ್ಣ.. ಸುಧಾಕರ್ ಅಣ್ಣ ಎಂದು ಹೇಳುವ ಮೂಲಕ ಗಮನಸೆಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!

ED ದಾಳಿ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಬೆನ್ನಿಗೆ ನಿಂತ ಎಸ್‌ಟಿ ಸಮುದಾಯ: ಬೃಹತ್‌ ಸಮಾವೇಶಕ್ಕೆ ಮುಂದು, ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು..!

ಕಾಂಗ್ರೆಸ್‌ ದೇಶವಿರೋಧಿಗಳ ಪರ, ಉಮರ್ ಖಾಲಿದ್‌ ಪರ ಹರಿಪ್ರಸಾದ್ ಹೇಳಿಕೆಗೆ ಸಂಸದ ಬೊಮ್ಮಾಯಿ ತೀವ್ರ ಕಿಡಿ