ಪ್ರದೀಪ್ ಈಶ್ವರ್ 
ರಾಜಕೀಯ

ನನಗೆ ಕಾಂಗ್ರೆಸ್ ಪಕ್ಷದ ಭವಿಷ್ಯವೇ ಮುಖ್ಯ: ಏನೇ ಭಿನ್ನಾಭಿಪ್ರಾಯಗಳಿದ್ದರೂ 4 ಗೋಡೆ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ; ಪ್ರದೀಪ್ ಈಶ್ವರ್‌

ಎಂ.ಸಿ ಸುಧಾಕರ್‌ ಹಾಗೂ ಶಾಸಕ ಪ್ರದೀಪ್‌ ಈಶ್ವರ್‌ ನಡುವೆ ಬಿನ್ನಾಭಿಪ್ರಾಯಗಳು ಕೇಳಿಬಂದ ಹಿನ್ನೆಲೆಯಲ್ಲೇ ಪ್ರದೀಪ್‌ ಈಶ್ವರ್‌ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಏನೇ ಭಿನ್ನಾಭಿಪ್ರಾಯಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ, ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ. ನನಗೆ ನನ್ನ ಪಕ್ಷವೇ ಮುಖ್ಯ, ನನ್ನ ಕಾಂಗ್ರೆಸ್ ಪಕ್ಷದ ಭವಿಷ್ಯವೇ ಮುಖ್ಯ. ಕಾಂಗ್ರೆಸ್ ಪಾರ್ಟಿ ಕಚೇರಿಯಲ್ಲಿ ಕಸ ಗುಡಿಸಲು ನಾನು ಸಿದ್ಧ ಎಂದು ಅವರು ಹೇಳಿದ್ದಾರೆ.

ಎಂ.ಸಿ ಸುಧಾಕರ್‌ ಹಾಗೂ ಶಾಸಕ ಪ್ರದೀಪ್‌ ಈಶ್ವರ್‌ ನಡುವೆ ಬಿನ್ನಾಭಿಪ್ರಾಯಗಳು ಕೇಳಿಬಂದ ಹಿನ್ನೆಲೆಯಲ್ಲೇ ಪ್ರದೀಪ್‌ ಈಶ್ವರ್‌ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಮ್ಮ ಕಾಂಗ್ರೆಸ್ ಪಕ್ಷವು 2028ಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಮತ್ತು 2029ಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು, ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಬೇಕು. ಇದು ನಮ್ಮ ಅತೀ ದೊಡ್ಡ ಜವಾಬ್ದಾರಿ.

ಏನೇ ಭಿನ್ನಾಭಿಪ್ರಾಯಗಳಿದ್ದರೂ, ನಾಲ್ಕು ಗೋಡೆಗಳ ಮಧ್ಯೆ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ. ನನಗೆ ನನ್ನ ಪಕ್ಷವೇ ಮುಖ್ಯ. ನನ್ನ ಕಾಂಗ್ರೆಸ್ ಪಕ್ಷದ ಭವಿಷ್ಯವೇ ಮುಖ್ಯ. ಮತ್ತೊಮ್ಮೆ ಹೇಳುತ್ತಿದ್ದೇನೆ, ಕಾಂಗ್ರೆಸ್ ಪಕ್ಷದಲ್ಲಿ, ಕಾಂಗ್ರೆಸ್ ಪಾರ್ಟಿ ಕಚೇರಿಯಲ್ಲಿ ಕಸ ಗುಡಿಸಲೂ ನಾನು ಸಿದ್ಧವಿದ್ದೇನೆ.

ಜೈ ಕಾಂಗ್ರೆಸ್

ಜೈ ರಾಹುಲ್ ಗಾಂಧೀಜಿ ಎಂದು ಬರೆದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಎಂ.ಸಿ. ಸುಧಾಕರ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ದೂರು ನೀಡಿದೆ.

ಶಾಸಕರ ಕಾರ್ಯವೈಖರಿ, ಪಕ್ಷ ಸಂಘಟನೆ, ಸ್ಥಳೀಯ ಚುನಾವಣೆಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರ ಸೇರಿದಂತೆ ಹಲವು ಅಂಶಗಳ ಬಗ್ಗೆ ನಿಯೋಗ ಅಹವಾಲು ಸಲ್ಲಿಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡಬಾರದು ಎಂಬ ಒತ್ತಾಯವನ್ನೂ ಮುಖಂಡರು ಮುಂದಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಸುಲೈಮಾನ್ ಶಾ ಅಲಿಯಾಸ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ

ಮಳೆ, ಪ್ರವಾಹದಿಂದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ ಘೋಷಣೆ. ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ..!

ಬೆಂಗಳೂರು ವಿಸ್ತರಣೆಗೆ ಸರ್ಕಾರ ಹೊಸ ರೂಪುರೇಷೆ: ಭವಿಷ್ಯದ ಸಂಚಾರ ಸಮಸ್ಯೆ ತಡೆಯಲು ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಮಹಾ ಬದಲಾವಣೆ: GBA ಮಾದರಿಯಲ್ಲಿ ಮರುಸಂಘಟನೆ, ಅಕ್ಟೋಬರ್‌ನಲ್ಲಿ ಅಧಿಸೂಚನೆ ಸಾಧ್ಯತೆ..!