ಶ್ರವಣಬೆಳಗೊಳ: ರಾಜ್ಯ, ಕೇಂದ್ರ ಸರ್ಕಾರ ಗಣ್ಯರ ರಕ್ಷಣೆ ಹಾಗೂ ಅವರ ಪ್ರಯಾಣಿಸುವ ವಾಹನಗಳು, ವಿಮಾನ ಹಾಗೂ ಹೆಲಿಕಾಪ್ಟರ್‍ಗಳ ನಿರ್ವಹಣೆಗಾಗಿ ಅತಿ ಹೆಚ್ಚಿನ ಗಮನ ಹರಿಸಿದ್ದರೂ ಅವುಗಳು ಆಗಿದ್ದಾಂಗೆ ಕೈ ಕೊಡುತ್ತಾ ಬಂದಿವೆ.
ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಯಣಿಸುತ್ತಿದ್ದ ಹೆಲಿಕ್ಯಾಪ್ಟರ್‍ನಲ್ಲಿ ತಾಂತ್ರಿಕ ದೋಷ ಕಂಡು ಯಾವುದೇ ಆತಂಕವಿಲ್ಲದೆ ನಿಟ್ಟುಸಿರುವ ಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗಾಗಿ ಹೆಲಿಕಾಪ್ಟರ್‍ನಲ್ಲಿ ಬಂದ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸಂದರ್ಭದಲ್ಲಿ ವ್ಯತ್ಯಯ ಕಾಣಿಸಿಕೊಂಡಿತು.
ಶ್ರವಣಬೆಳಗೊಳದ ದಕ್ಷಿಣ ಭಾಗದಲ್ಲಿ ಕೊತ್ತನಘಟ್ಟ ರಸ್ತೆಯಲ್ಲಿ ಸಮ್ಮೇಳನದ ಅಂಗವಾಗಿ ಹೆಲಿಪ್ಯಾಡ್ ನಿರ್ಮಿಸಿದ್ದು, ಬೆಂಗಳೂರಿನಿಂದ ಮುಖ್ಯಮಂತ್ರಿಗಳನ್ನು ಕರೆತಂದ ಹೆಲಿಕ್ಯಾಪ್ಟರ್ ಲ್ಯಾಂಡ್ ಆಗಲು ಅಗತ್ಯ ಸೂಚನೆಗಳನ್ನು ನೀಡಲಾಯಿತು. ಪೈಲಟ್ ಸೂಚನೆಗಳನ್ನು ಬಳಿಸಿಕೊಂಡು ಹೆಲಿಪ್ಯಾಡ್‍ನಲ್ಲಿ ಹೆಲಿಕ್ಯಾಪ್ಟರ್ ಇಳಿಸುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕುಂಡು ಬಂದ ಹಿನ್ನಲೆಯಲ್ಲಿ ನೆಲಕ್ಕೆ ಸರಿಯಾಗಿ ಲ್ಯಾಂಡ್ ಆಗದೆ ತಾಂತ್ರಿಕ ದೋಷ ಕಂಡು ಬಂದು ಮತ್ತೆ ಮೇಲಕ್ಕೆ ಹೋಗಿ ಎರಡು ನಿಮಿಷಗಳಲ್ಲಿ ತಾಂತ್ರಿಕ ದೋಷ ಪರಿಹರಿಸಿಕೊಂಡು ಮತ್ತೆ ಹೆಲಿಕ್ಯಾಪ್ಟರ್ ಲ್ಯಾಂಡ್ ಮಾಡಲಾಯಿತು.
ಮುಖ್ಯಮಂತ್ರಿಗಳನ್ನು ಕರೆತಂದ ಹೆಲಿಕಾಪ್ಟರ್ ಕೊತ್ತನಘಟ್ಟದ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಿಂದ ಚಕ್ರಗಳು ಭೂಮಿಗೆ ತಾಕುವ ಸಂದರ್ಭದಲ್ಲಿ ಲೋಪ ಕಂಡಿತು. ಇದನ್ನರಿತ ಪೈಲಟ್ ಮತ್ತೆ ಹೆಲಿಕಾಪ್ಟರ್ ಅನ್ನು ಟೇಕ್ ಮಾಡಿ ಚಕ್ರಗಳು ಹೊರ ಬಂದ ನಂತರ ಲ್ಯಾಂಡ್ ಮಾಡಿದರು. ಹೆಲಿಕಾಪ್ಟರ್‍ನಿಂದ ಚಕ್ರಗಳು ಹೊರ ಬಂದು ನೆಲಕ್ಕೆ ತಾಕದಿದ್ದರೆ ಮುಖ್ಯಮಂತ್ರಿ ಗಳು ಹೆಲಿಕ್ಯಾಪ್ಟರ್‍ನಲ್ಲಿಯೇ ಆಕಾಶದಲ್ಲಿ ಹಾರಾಡಿ ತಾಂತ್ರಿಕ ಸುವ್ಯವಸ್ಥೆಯ ನಂತರ ಕೆಳಗಿಳಿಯಬೇಕಾಗಿತ್ತು.
ಮತ್ತೆ ಕಾಪ್ಟರ್‍ನಲ್ಲಿ ದೋಷ ಹೆಲಿಕಾಪ್ಟರ್ ಇಳಿಯುವಾಗ ಕೊಂಚ ವಿಳಂಬವಾಯಿತೇ ಹೊರತು ಯಾವ ತಾಂತ್ರಿಕ ದೋಷವೂ ಉಂಟಾಗಲಿಲ್ಲ. ಏನೂ ಆಗಲಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ