ಸುದ್ದಿ-ಸಮಾಚಾರ

ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರೈಲು ಬಿಡಿ: ಸ್ವಾಮೀಜಿ

Guruprasad Narayana

ಹಾಸನ: ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಮುಖ್ಯ ಸ್ವಾಮೀಜಿ ಚಾರುಕೀರ್ತಿ ಭಟ್ಟಾಕರ ಸ್ವಾಮಿ, ೮೧ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಲುವಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡುವಂತೆ ರೈಲ್ವೆ ಸಚಿವಾಲಯವನ್ನು ಆಗ್ರಹಿಸಿದ್ದಾರೆ. ಸಮ್ಮೇಳನ ಫೆಬ್ರವರಿ ೧ ಕ್ಕೆ ಪ್ರಾರಂಭವಾಗಲಿದೆ.

ಹಾಗೆಯೇ ಅರಸೀಕೆರೆ ಜಂಕ್ಷನ್ ನಿಂದ, ಹಾಸನ ಮಾರ್ಗವಾಗಿ ಶ್ರವಣಬೆಳಗೊಳಕ್ಕೆ ಐದು ದಿನಗಳವರೆಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರದ ಕಡೆಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಈ ವಿಶೇಷ ರೈಲುಗಳು ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಿಂದ ಜನರು ಸಾಹಿತ್ಯ ಸಮ್ಮೇಳನಕ್ಕೆ ಬರಲು ಸಹಕಾರಿಯಾಗಲಿದೆ.

ಹೀಗೆ ೨೦೦೬ರಲ್ಲಿ ನಡೆದ ೧೧ ದಿನದ ಮಹಾಮಸ್ತಾಭಿಷೇಕಕ್ಕೆ ಸ್ವಾಮೀಜಿಯವರ ಕೋರಿಕೆ ಮೇರೆಗೆ ಮುಂಬೈ, ಆಗ್ರಾ ಮತ್ತು ಜೈಪುರದಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದೇ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತು ಜಿಲ್ಲ ಉಸ್ತವಾರಿ ಸಚಿವ ಎಚ್ ಸಿ ಮಹದೇವಪ್ಪ ಅವರೊಂದಿಗೆ ಸಭೆ ನಡೆಸಿದ್ದಾರೆ. ಮಹದೇವಪ್ಪ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

SCROLL FOR NEXT