ಸ್ಯಾನ್ ಫ್ರಾನ್ಸಿಸ್ಕೋ: ಮಂಗಳ ಗ್ರಹದಲ್ಲಿ ಮೀಥೇನ್ ಅನಿಲದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ನಾಸಾದ ಕ್ಯೂರಿಯಾಸಿಟಿ ರೋವರ್ ವರ್ಷಗಳ ಹಿಂದೆ ವರದಿ ನೀಡಿತ್ತು. ಆದರೆ ಇದೀಗ ಮೀಥೇನ್ ಅಂಶ ಇದೆ ಎಂದು ಎರಡು ತಿಂಗಳ ಹಿಂದೆ ಕ್ಯೂರಿಯಾಸಿಟಿ ಪತ್ತೆ ಹಚ್ಚಿದೆ.
ಇದೀಗ ಮಂಗಳನಲ್ಲಿ ಮಿಥೇನ್ ಪತ್ತೆಯಾಗಲು ಕಾರಣವೇನು ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದಾಗ್ಯೂ, ಮಿಥೇನ್ ಪತ್ತೆಯಾಗಲು ಮಂಗಳನಲ್ಲಿರುವ ಮೈಕ್ರೋಬ್ಸ್‌ಗಳೇ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಹಿಂದೆ ಮಂಗಳನ ಮೇಲ್ಮೈಯಲ್ಲಿ ಪತ್ತೆಯಾದ ಮಣ್ಣಿನಲ್ಲಿ ಕಾರ್ಬನ್ ಅಂಶ ಪತ್ತೆಯಾಗಿತ್ತು. ಹೀಗಿರುವಾಗ ಮಂಗಳನಲ್ಲಿ ಜೀವಿಗಳು ವಾಸಿಸಿದ್ದವು ಎಂಬುದಕ್ಕೆ ಇದು ನೇರವಾದ ಪುರಾವೆಯನ್ನು ನೀಡುತ್ತಿಲ್ಲವಾದರೂ, ಈ ಹಿಂದೆ ಅಥವಾ ಇನ್ನು ಮುಂದೆ ಇಲ್ಲಿ ಪ್ರಾಣಿಗಳು ಬದುಕಲು ಸಾಧ್ಯ ಎಂಬುದನ್ನು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸುಮಾರು ನೂರು ವರ್ಷಗಳ ಹಿಂದೆ ಮಂಗಳನಲ್ಲಿ ಸೂರ್ಯ ಬೆಳಕು ಬಿದ್ದು ರಸಾಯನಿಕ ಕ್ರಿಯೆ ಏರ್ಪಟ್ಟು ಅಲ್ಲಿ ಮಿಥೇನ್ ಅನಿಲ ಉತ್ಪಾದನೆಯಾಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.