ವಿಜ್ಞಾನ-ತಂತ್ರಜ್ಞಾನ

ನ್ಯೂಸ್ ಫೀಡ್ ಕಿರಿಕಿರಿ ತಪ್ಪಿಸಲು ಫೇಸ್‌ಬುಕ್‌ನ ಹೊಸ ಫೀಚರ್

Rashmi Kasaragodu

ನವದೆಹಲಿ: ಫೇಸ್‌ಬುಕ್ ತೆರೆದಾಗ ನಿಮ್ಮ ಫೇಸ್‌ಬುಕ್ ಸ್ನೇಹಿತರ ಎಲ್ಲ ಅಪ್‌ಡೇಟ್‌ಗಳು ನಿಮ್ಮ ವಾಲ್‌ನಲ್ಲಿ ಕಾಣಿಸಿಕೊಂಡು ಕಿರಿಕಿರಿ ಅನುಭವಿಸುತ್ತಿದ್ದೀರಾ? ನ್ಯೂಸ್ ಫೀಡ್‌ನಲ್ಲಿ ಬರುವ ಇನ್ನೊಬ್ಬರ ಪೋಸ್ಟ್‌ಗಳು ನಿಮಗೆ ಅನಗತ್ಯ ಎಂದು ಅನಿಸಿದರೆ, ಇನ್ಮುಂದೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು.

ಅದಕ್ಕಾಗಿ ಫೇಸ್‌ಬುಕ್ ಶನಿವಾರ ಸೆಟ್ಟಿಂಗ್‌ನಲ್ಲಿ ಮಾರ್ಪಾಡು ಮಾಡಿದ್ದು, ಈ ಮೂಲಕ ಅನಗತ್ಯ ಪೋಸ್ಟ್‌ಗಳು ನ್ಯೂಸ್ ಫೀಡ್ ನಲ್ಲಿ ಕಾಣಿಸಿಕೊಳ್ಳದಂತೆ ತಡೆಯಬಹುದು.

ಇದಕ್ಕೆ ಮಾಡಬೇಕಾದುದು ಇಷ್ಟೇ. ಫೇಸ್‌ಬುಕ್‌ನ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಮ್ಯಾನೇಜ್ ನ್ಯೂಸ್‌ಫೀಡ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಸ್ನೇಹಿತರನ್ನು ರೀ ಫಾಲೋ ಅಥವಾ ಅನ್‌ಫಾಲೋ ಮಾಡುವ ಮೂಲಕ ನ್ಯೂಸ್ ಫೀಡ್‌ಗಳನ್ನು ನಿಯಂತ್ರಣ ಮಾಡಬಹುದು.

ಶನಿವಾರದಿಂದ ಫೇಸ್‌ಬುಕ್‌ನಲ್ಲಿ ಈ ಫೀಚರ್ ಲಭ್ಯವಾಗಿದ್ದು, ಡೆಸ್ಕ್‌ಟಾಪ್ ಮತ್ತು ಮೊಬೈಲ್ ಫೋನ್‌ನಲ್ಲಿಯೂ ಇದು  ಅಪ್‌ಡೇಟ್ ಆಗಿದೆ.

SCROLL FOR NEXT