ವಿಜ್ಞಾನ-ತಂತ್ರಜ್ಞಾನ

ಮಂಜುಗಡ್ಡೆ ಧೂಮಕೇತುವಿನ ಮೇಲಿಳಿದ ಫೈಲೀ ಲ್ಯಾಂಡರ್

Guruprasad Narayana

ಡರ್ಮ್ ಸ್ಟೆಡ್: ಯೂರೋಪಿನ ಬಾಹ್ಯಾಕಾಶ ನೌಕೆ ಭೂಮಿಯಿಂದ ನೂರಾರು ದಶಲಕ್ಷ ಮೈಲಿ ದೂರವಿರುವ ಮಂಜುಗಡ್ಡೆ, ಧೂಳಿನ ಮೇಲ್ಮೈ ಇರುವ ವೇಗವಾಗಿ ಚಲಿಸುತ್ತಿರುವ ಧೂಮಕೇತುವಿನ ಮೇಲೆ ಫಲಕಾರಿಯಾಗಿ ಇಳಿದಿದೆ. ಇದು ಬ್ರಹ್ಮಾಂಡದ ಉಗಮದ ಬಗ್ಗೆ ಇರುವ ದೊಡ್ಡ ಪ್ರಶ್ನೆಗೆ ಕೆಲವು ಉತ್ತರಗಳನ್ನು ನೀಡಲಿದೆ ಎಂದು ಊಹಿಸಲಾಗಿದೆ.

ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ರೊಸೆಟ್ಟಾ ಬಾಹ್ಯಾಕಾಶ ನೌಕೆ ಫೈಲೀ ಲ್ಯಾಂಡರ್  ಅನ್ನು ಘಂಟೆಗೆ ೪೧೦೦೦ ಮೈಲಿ ಚಲಿಸುತ್ತಿದ್ದ ಧೂಮಕೇತುವಿನ ಮೇಲೆ ಇಳಿಸುವವರೆಗೂ ೭ ಘಂಟೆಗಳ ಉದ್ವೇಗದ ಸಮಯದ ನಂತರ ವಿಜ್ಞಾನಿಗಳು ಸಂಭ್ರಮಿಸಿದ್ದಾರೆ.

ನಂತರ ೧೬೦೩ ಜಿ ಎಂ ಟಿ ಸಮಯಕ್ಕೆ, ೧೦೦ ಕೆ ಜಿ ಯ ಫೈಲೀ ಲ್ಯಾಂಡರ್, ೬೭ಪಿ/ಚುರ್ಯುಮೋವ್-ಜೆರಾಸಿಮೆನ್ಕೋ ಹೆಸರಿನ ಮಂಜುಗಡ್ಡೆ ಮೇಲ್ಮೈನ ಧೋಮಕೇತುವನ್ನು ಸ್ಪರ್ಶಿಸಿದ ನಂತರ ಸಂಜ್ಞೆ ಕಳುಹಿಸಿದೆ.

"ಲ್ಯಾಂಡರ್ ಧೂಮಕೇತುವಿನ ಮೇಲೆ ಇಳಿದಿರುವುದನ್ನ ದೃಢೀಕರಿಸುತ್ತೇವೆ" ಎಂದು ಈ ಯಾನದ ನಿರ್ದೇಶಕ ಆಂಡ್ರಿಯಾ ಅಕ್ಕಮಾಝೊ ತಿಳಿಸಿದ್ದಾರೆ.

ಇನ್ನು ಮುಂದೆ ಸೂರ್ಯನ ಸುತ್ತ ಸುತ್ತಲಿರುವ ಧೂಮಕೇತುವಿನ ಜೊತೆ ಜೊತೆಗೇ ಚಲಿಸಲಿರುವ ರೊಸೆಟ್ಟಾ ಮತ್ತು ಫೈಲೀ, ೨೧ ವಿವಿಧ ಸಾಧನಗಳನ್ನು ಬಳಸಿ, ಈ ಎರಡೂ ಭಾಹ್ಯಾಕಾಶ ಯಂತ್ರಗಳು ಮಾಹಿತಿಯನ್ನು ಕಲೆ ಹಾಕಲಿವೆ. ಈ ಮಾಹಿತಿ ಬ್ರಹ್ಮಾಂಡದ ಉಗಮ, ಭೂಮಿಯ ಮೇಲಿನ ಜೀವ ವೈವಿಧ್ಯದ ಉಗಮದ ಪ್ರಶ್ನೆಗಳನ್ನು ಉತ್ತರಿಸಲಿದೆ ಎನ್ನಲಾಗಿದೆ.

SCROLL FOR NEXT