ನವದೆಹಲಿ: ಎಂಡ್ ಆಫ್ ದಿ ವರ್ಲ್ಡ್ ಅಥವಾ ವಿಶ್ವದ ಅಂಚಿನಲ್ಲಿರುವ ಭೂಭಾಗವೆಂದೇ ಕರೆಯಲ್ಪಡುವ ಸೈಬೀರಿಯಾದ ಯಮಲ್ ಪರ್ಯಾಯ ದ್ವೀಪದಲ್ಲಿ ದಿಢೀರ್ ಸೃಷ್ಟಿಯಾಗಿರುವ ದೊಡ್ಡ ಕಂದಕ ಸಾಕಷ್ಟು ಆಂತಕ, ಕೌತುಕ ಸೃಷ್ಟಿಸಿದೆ. ಈ ವರ್ಷಾರಂಭದಲ್ಲಿ ಉತ್ತರ ಧ್ರುವದಲ್ಲಿ ಸೃಷ್ಟಿಯಾಗಿರುವ ಈ ಕಂದಕದತ್ತ ಈಗ ವಿಜ್ಞಾನಿಗಳ ಕುತೂಹಲದ ಕಣ್ಣು ನೆಟ್ಟಿದೆ.
ಇಂಧ ವಿಚಿತ್ರ ಕಂದಕದೊಳಗೆ ರಷ್ಯಾದ ಉತ್ತರಧ್ರುವ ಅನ್ವೇಷಣಾ ಕೇಂದ್ರದ ನಿರ್ದೇಶಕ ವ್ಲಾದಿಮಿರ್ ಪುಷ್ಕರೇವ್ ನೇತೃತ್ವದ ತಂಡ ಈಗಾಗಲೇ ಇಳಿಯುವ ಸಾಹಸ ಮಾಡಿದೆ. ಈ ಮೂಲಕ ಈ ದೊಡ್ಡ ಕಂದಕ ಹೇಗೆ ಸೃಷ್ಟಿಯಾಯಿತು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಿದೆ.
ಸದ್ಯ ಈ ರೀತಿಯ ಕಂದಕದಿಂದ ಯಾವುದೇ ಆತಂಕ ನಮಗೆ ಕಂಡು ಬಂದಿಲ್ಲ. ಆದರೂ ನಾವು ಈ ಕಂದಕ ಹೇಗೆ ನಿರ್ಮಾಣವಾಯಿತು ಎನ್ನುವದನ್ನು ಅಧ್ಯಯನ ನಡೆಸುವ ಅಗತ್ಯವಿದೆ. ಈ ಮೂಲಕ ಕಂದಕದಿಂದ ವಿನಾ ಕಾರಣ ಆತಂಕಪಡುವ ಸನ್ನಿವೇಶವನ್ನು ನಿವಾರಿಸಿಕೊಳ್ಳಬೇಕದೆ ಎನ್ನುತಾರೆ ಅವರು.
ವ್ಲಾದಿಮಿರ್ ಅವರ ತಂಡ ವಾತಾವರಣದಲ್ಲಿ ಉಷ್ಣತೆ ತೀವ್ರ ಕಡಿಮೆ ಇದ್ದಾಗಲೇ ಈ ಕಂದಕದೊಳಗೆ ಇಳಿಯುವ ಪ್ರಯತ್ನ ಮಾಡುತ್ತಿದೆ. ಬೇಸಿಗೆಗಾಲಕ್ಕಿಂತ ಚಳಿಗಾಲದಲ್ಲಿ ನೆಲ ಹೆಚ್ಚು ಗಟ್ಟಿಯಾಗಿರುತ್ತದೆ. ಹಾಗಾಗಿ ಈ ಕಂದಕದೊಳಗೆ ಇಳಿಯುವುದು ಸುಲಭವಾಗುತ್ತದೆ.