ವಿಜ್ಞಾನ-ತಂತ್ರಜ್ಞಾನ

ಪ್ರತಿಯೊಂದು ಟ್ವೀಟ್ ಹುಡುಕುವ ಅವಕಾಶ ತೆರೆದಿಟ್ಟ ಟ್ವಿಟ್ಟರ್

Guruprasad Narayana

ವಾಶಿಂಗ್ಟನ್: ಇನ್ನು ಮುಂದೆ ನೂರಾರು ಬಿಲಿಯನ್ ಟ್ವೀಟ್ ಸಂದೇಶಗಳನ್ನು ಹುಡುಕುವ ಸೌಲಭ್ಯವನ್ನು ೨೦೦೬ ರಲ್ಲಿ ಪ್ರಾರಂಭವಾದ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ಸಂಸ್ಥೆ ಅವಕಾಶ ಮಾಡಿಕೊಡುತ್ತಿದೆ.

ಟ್ವಿಟ್ಟರ್ ಬಳಕೆದಾರರು ಉಪಯೋಗಿಸುವ ನಿರ್ಧಿಷ್ಟ ಪದ, ಹ್ಯಾಷ್ ಟ್ಯಾಗ್, ಇಂತಿಂಥ ದಿನದ ಮಧ್ಯೆ ಮಾಡಿದ ಟ್ವೀಟ್ ಮುಂತಾದುವುಗಳ ಮೇಲೆ ಹುಡುಕುವ ಅವಕಾಶವನ್ನು ಈಗ ಈ ಪ್ರಬಲ ಸರ್ಚ್ ಎಂಜಿನ್ ಅವಕಾಶ ಮಾಡಿಕೊಡಲಿದೆ.

"ಎಂಟು ವರ್ಷದ ಹಿಂದೆ ಬರೆದ ಒಂದು ಸರಳ ಟ್ವೀಟ್ ನಿಂದ ಹಿಡಿದು ನೂರಾರು ಬಿಲಿಯನ್ ಟ್ವೀಟ್ ಗಳು ಜನರ ಅನುಭವಗಳನ್ನು ಮತ್ತು ಪ್ರಮುಖ ಐತಿಹಾಸಿಕ ಘಟನೆಗಳನ್ನು ಹಿಡಿದಿಟ್ಟಿವೆ" ಎಂದು ಈ ಯೋಜನೆಯ ಜಂಟಿ ನಾಯಕ ಯಿ ಜುಆಂಗ್ ಬರೆದಿದ್ದಾರೆ.

"ನಿಜ ಸಮಯದಲ್ಲಿ ಘಟನೆಗಳನ್ನು ಮತ್ತು ಅನಾವರಣಗೊಳ್ಳುತ್ತಿರುವ ಸುದ್ದಿಗಳನ್ನು ಹುಡುಕುವಲ್ಲಿ ನಮ್ಮ ಸರ್ಚ್ ಎಂಜಿನ್ ಬಹಳ ಪ್ರಬಲವಾಗಿದೆ ಮತ್ತು ಇತ್ತೀಚಿನ ಟ್ವೀಟ್ ಗಳಿಗೆ ಮತ್ತು ನವೀನತೆಗೆ ಒತ್ತು ಕೊಡುತ್ತದೆ. ಆದರೆ ನಮ್ಮ ಮುಂದಿನ ದೀರ್ಘ ಕಾಲದ ಗುರಿ ಎಂದರೆ ಇಲ್ಲಿಯವರೆಗೂ ಸಾರ್ವಜನಿಕವಾಗಿ ಪ್ರಕಟವಾದ ಯಾವುದೇ ಟ್ವೀಟ್ ಅನ್ನು ಸುಲಭವಾಗಿ ಹುಡುಕಬೇಕೆನ್ನುವುದು" ಎಂದು ಜುಆಂಗ್ ಬರೆದಿದ್ದಾರೆ.

ಈ ಹೊಸ ಟ್ವೀಟ್ ಇಂಡೆಕ್ಸ್ ೧೦೦ ಮಿಲ್ಲಿ ಸೆಕಂಡ್ ಗಳಲ್ಲಿ ಹುಡುಕುವ ಸಾಮರ್ಥ್ಯ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.

SCROLL FOR NEXT