ಕೋಲ್ಕತ್ತ : ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣವು ಶನಿವಾರ ಸಂಭವಿಸಲಿದ್ದು, ಭಾರತದ ಪೂರ್ವ ಭಾಗದ ಕೆಲವೆಡೆ ಗೋಚರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಾಹ್ನ 3.45ರಿಂದ ಗ್ರಹಣ ಆರಂಭವಾಗುತ್ತದೆ. ಸಂಜೆ 5.27ಕ್ಕೆ ಗ್ರಹಣವು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿಕೊಳ್ಳುತ್ತದೆ. ಈ ಸ್ಥಿತಿ 5.32ರ ವರೆಗೂ ಇರುತ್ತದೆ. ನಂತರ ಭಾಗಶಃ ಗ್ರಹಣವು ರಾತ್ರಿ 7.14ರ ವರೆಗೂ ಗೋಚರಿಸುತ್ತದೆ.
ಅರುಣಾಚಲಪ್ರದೇಶದ ಪೂರ್ವ ಭಾಗದ ಕೆಲವೆಡೆ ಗೋಚರಿಸಲಿದ್ದು, ತೇಜು ಮತ್ತು ರೋಯಿಂಗ್‌ನಲ್ಲಿ ಚಂದ್ರೋದಯವಾದ ಕೂಡಲೇ ಸುಮಾರು 4 ನಿಮಿಷ 43 ಸೆಕೆಂಡ್‌ಗಳ ಕಾಲ ಸಂಪೂರ್ಣ ಚಂದ್ರಗ್ರಹಣ ಕಾಣಿಸಲಿದೆ. ದೇಶದ ಇತರ ಭಾಗಗಳಲ್ಲಿ ಚಂದ್ರಗ್ರಹಣವು ಭಾಗಶಃ ಗೋಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.