ನವದೆಹಲಿ: ಕೆಲವು ನಗರಗಳಲ್ಲಿ ಪರೀಕ್ಷಿಸಿದ ನಂತರ ಈಗ ದೇಶದಾದ್ಯಂತ ೨೯೬ ಪಟ್ಟಣಗಳಲ್ಲಿ ವಾಣಿಜ್ಯಾತ್ಮಕವಾಗಿ ೪-ಜಿ ಸೇವಗಳನ್ನು ಅನಾವರಣ ಮಾಡುವುದಾಗಿ ಭಾರತಿ ಏರ್ಟೆಲ್ ಸಂಸ್ಥೆ ತಿಳಿಸಿದೆ.
ಇದಕ್ಕೂ ಮೊದಲು ಏಪ್ರಿಲ್ ೨೦೧೨ರಲ್ಲಿ ಕೋಲ್ಕತ್ತಾದಲ್ಲಿ ಪ್ರಯೋಗಾತ್ಮಕವಾಗಿ ೪-ಜಿ ಸೇವೆಗಳನ್ನು ಪ್ರಾರಂಭಿಸಿತ್ತು.
"ಈಗ ರಾಷ್ಟ್ರದಾದ್ಯಂತ ನಮ್ಮ ಗ್ರಾಹಕರು ಅತಿ ವೇಗದ ವೈರ್ ರಹಿತ ಬ್ರಾಡ್ ಬ್ಯಾಂಡ್ ಸೇವೆಯನ್ನು ಏರ್ಟೆಲ್ ೪-ಜಿ ಮೂಲಕ ಪಡೆದುಕೊಳ್ಳಬಹುದಾಗಿದೆ. ಎಚ್ ಡಿ ವಿಡಿಯೋ ಸ್ಟ್ರೀಮಿಂಗ್ ಅನ್ನು ತಡೆರಹಿತವಾಗಿ ಅನುಭವಿಸಬಹುದಾಗಿದೆ ಹಾಗು ಸಿನೆಮಾಗಳನ್ನು ವೇಗವಾಗಿ ಡೌನ್ ಲೋಡ್, ಅಪ್ ಲೋಡ್ ಮಾಡಬಹುದಾಗಿದೆ.
"ಈ ಸೇವೆ ಸ್ಮಾರ್ಟ್ ಫೋನುಗಳಲ್ಲಿ, ಡಾಂಗಲ್ ಗಳ ಮೂಲಕ ಹಾಗು ವೈ ಫೈ ೪-ಜಿ ಹಾಟ್ ಸ್ಪಾಟ್ ಗಳಲ್ಲಿ ಲಭ್ಯವಿದೆ" ಎಂದು ಏರ್ಟೆಲ್ ಹೇಳಿಕೆಯಲ್ಲಿ ತಿಳಿಸಿದೆ.
ಈಗ ೩ಜಿ ಸೇವಗಳನ್ನು ಹೊಂದಿರುವ ಗ್ರಾಹಕರು ಅದೇ ಬೆಲೆಯಲ್ಲಿ ೪ಜಿ ಸೇವಗಳನ್ನು ಪಡೆಯಬಹುದಾಗಿದೆ ಎಂದು ಏರ್ಟೆಲ್ ತಿಳಿಸಿದೆ.