ವಿಜ್ಞಾನ-ತಂತ್ರಜ್ಞಾನ

ಚೈಲ್ಡ್ ಪೋರ್ನ್ ತಡೆಗೆ ಕೈ ಜೋಡಿಸಿದ ಗೂಗಲ್, ಟ್ವಿಟರ್, ಫೇಸ್ ಬುಕ್

Srinivas Rao BV

ನ್ಯೂಯಾರ್ಕ್: ಫೇಸ್ ಬುಕ್, ಗೂಗಲ್, ಟ್ವಿಟರ್, ಮೈಕ್ರೋ ಸಾಫ್ಟ್, ಯಾಹೂ ಸಂಸ್ಥೆಗಳು ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ/ ವಿಡಿಯೋಗಳನ್ನು ತಡೆಗಟ್ಟಲು ಕೈಜೋಡಿಸಿವೆ. ಬ್ರಿಟನ್ ನ ಇಂಟರ್ ನೆಟ್ ವಾಚ್ ಫೌಂಡೇಷನ್(ಐಡಬ್ಲ್ಯೂಎಫ್) ನೊಂದಿಗೆ ಕೆಲಸ ಮಾಡುತ್ತಿವೆ.

ಚಾರಿಟಬಲ್ ಸಂಸ್ಥೆಯಾಗಿರುವ ಬ್ರಿಟನ್ ನ(ಐಡಬ್ಲ್ಯೂಎಫ್) ಲೈಂಗಿಕ ಕಿರುಕುಳದ ಚಿತ್ರಗಳನ್ನು ಪ್ರತ್ಯೇಕಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರತಿಯೊಂದುಚಿತ್ರಕ್ಕೂ ವಿಭಿನ್ನ ಹ್ಯಾಷ್ ನ್ನು ನಿಗದಿಪಡಿಸಿರಲಾಗುತ್ತದೆ. ಇದರಿಂದಾಗಿ ನಿರ್ದಿಷ್ಟ ಚಿತ್ರವನ್ನು ಗುರುತಿಸಲು ಸಾಧ್ಯವಾಗುತ್ತದೆ. ಐಡಬ್ಲ್ಯೂಎಫ್ ಬಳಿ ಎಲ್ಲಾ ಹ್ಯಾಷ್ ಗಳ ದಾಖಲೆ ಇರಲಿದ್ದು ಈ ವರೆಗೂ ಕೇವಲ 5 ಕಂಪನಿಗಳೊಂದಿಗೆ ದಾಖಲೆಗಳನ್ನು ಹಂಚಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇತರ ಕಂಪನಿಗಳಿಗೂ ವಿಸ್ತರಿಸುವ ಯೋಜನೆ ಹೊಂದಲಾಗಿದೆ.

ಐಡಬ್ಲ್ಯೂಎಫ್ ತಯಾರಿಸಿರುವ ಈ ತಂತ್ರಜ್ಞಾನ ಜಾರಿಯಾದ ನಂತರ ಫೇಸ್ ಬುಕ್ ಹಾಗೂ ಟ್ವಿಟರ್ ಗಳಲ್ಲಿ ಹಂಚಿಕೆಯಾಗುವ ಚಿತ್ರಗಳು ಸ್ಕ್ಯಾನ್ ಅಗಲಿದ್ದು,  ಮಕ್ಕಳ ಅಶ್ಲೀಲ ಚಿತ್ರ/ ವಿಡಿಯೋಗಳು ಕಂಡುಬಂದಲ್ಲಿ ಅಪ್ ಲೋಡ್ ಮಾಡದಂತೆ ತಡೆಹಿಡಿಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ  ಮಕ್ಕಳ ಅಶ್ಲೀಲ ಚಿತ್ರಗಳು ಅಪ್ ಲೋಡ್ ಆಗದಂತೆ ತಡೆಹಿಡಿಯಲು ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬ ನಿರೀಕ್ಷೆ ಇದೆ.

SCROLL FOR NEXT