ವಿಜ್ಞಾನ-ತಂತ್ರಜ್ಞಾನ

ಅಪರೂಪದ ಪ್ರಾಣಿ ಸಂತತಿ ನಾಶವಾಗಲು ಮಾನವನೇ ಕಾರಣ

Srinivas Rao BV

ಲಂಡನ್: ಕೆಲವು ವನ್ಯ ಮೃಗಗಳನ್ನು ಹಾಲಿ ತಲೆಮಾರು ಕಾಲ್ಪನಿಕ ಪ್ರಾಣಿಗಳು ಎಂದುಕೊಂಡಿದೆ. ಡಿನೋಸಾರ್ ಸೇರಿದಂತೆ ಉಣ್ಣೆಯ ಖಡ್ಗಮೃಗ, ಸೊಂಡಿಲಿರುವ ಹುಲಿ ಹೀಗೆ ಊಹಿಸಲೂ ಆಗದಂಥ ಹಲವು ಭಯಾನಕ ಪ್ರಾಣಿಗಳಿದ್ದದ್ದು ನಿಜ ಎಂದು ಸಂಶೋಧನೆಗಳಿಂದ ಸಾಬೀತೇನೋ ಆಗಿದೆ. ಆದರೆ ಅವುಗಳ ಸಂತತಿ ನಶಿಸಲು ಪ್ರಾಕೃತಿಕ ಬದಲಾವಣೆಗಳು ಕಾರಣ ಎಂದೇ ಮನುಷ್ಯ ಹೇಳಿಕೊಂಡು ಬಂದಿದ್ದ. ಆದರೆ ಈ ಬೃಹತ್ ಮೃಗಗಳ ನಾಶಕ್ಕೆ ಮನುಷ್ಯನೇ ಕಾರಣ ಎಂದು ನೂತನ ಅಧ್ಯಯನವೊಂದರಿಂದ ಬಯಲಾಗಿದೆ.

ಶಿಲಾಯುಗದ ಮಾನವ ಪ್ರಕೃಉತಿಯೊಂದಿಗೆ ಕಾಡುಪ್ರಾಣಿಗಳೊಂದಿಗೆ ಸೌಹಾರ್ದದಿಂದದ್ದನೆಂಬ ನಂಬಿಕೆ ಇದರಿಂದ ಸುಳ್ಳಾಗಿದೆ. ಜೈಂಟ್ ಆರ್ಮಡಿಲ್ಲೋ, ವುಲ್ಲೀ ರೈನೋ, ವುಲ್ಲೀ ಮಮ್ಮೂಥ್, ಸಬ್ರೆಟೂಥ್ ಟೈಗರ್ ಮುಂತಾದ ಪ್ರಾಣಿಗಳ ಸಾವಿಗೆ ಮನುಷ್ಯನೇ ಕಾರಣ ಎಂದಿರುವ ಅಧ್ಯಯನ 80  ಸಾವಿರ ವರ್ಷಗಳಲ್ಲಿ ಈ ಅಪರೂಪದ ಪ್ರಾಣಿ ಸಂಕುಲ ನಾಶವಾಗಿದೆ ಎಂಬ ವಾದ ಮುಂದಿಟ್ಟಿದೆ.

SCROLL FOR NEXT