ವಿಜ್ಞಾನ-ತಂತ್ರಜ್ಞಾನ

ಜಿಸ್ಯಾಟ್-6ಗೆ ಕೌಂಟ್‍ಡೌನ್

Mainashree

ಬೆಂಗಳೂರು: ಭಾರತದ ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್ -6 ಗುರುವಾರ ಉಡಾವಣೆಯಾಗಲಿದ್ದು, ಬುಧವಾರ ಕ್ಷಣಗಣನೆ ಶುರುವಾಗಲಿದೆ.

ಉಡಾವಣೆಯ 29 ಗಂಟೆಗಳ ಕೌಂಟ್ ಡೌನ್ ಪ್ರಾರಂಭಿಸಲು ಈಗಾಗಲೇ ಮಿಷನ್ ರೆಡಿನೆಸ್ ರಿವ್ಯೂ ಕಮಿಟಿ ಮತ್ತು ಲಾಂಚ್ ಆಥರೈಸೇಷನ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿರುವುದಾಗಿ ಇಸ್ರೋ ತಿಳಿಸಿದ್ದು ಬುಧವಾರ 11.52ರಿಂದ ಕ್ಷಣ ಗಣನೆ ಆರಂಭವಾಗಲಿದೆ.

ಜಿಎಸ್ ಎಲ್ ವಿ-ಡಿ6 ವಾಹನದಲ್ಲಿ ಜಿಸ್ಯಾಟ್-6 ಕಕ್ಷೆಯತ್ತ ಜಿಗಿಯಲಿದ್ದು ಆ.27ರ ಸಂಜೆ 4.53ಕ್ಕೆ ಶ್ರೀ ಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಲ್ಲಿ ಇದಕ್ಕಾಗಿ ವೇದಿಕೆ ಸಜ್ಜಾಗಿದೆ.

SCROLL FOR NEXT