ನ್ಯೂಯಾರ್ಕ್: ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಫೇಸ್ ಬುಕ್ ಮಾದರಿಯಲ್ಲಿ ಗ್ರಾಹಕರ ಟೈಮ್ ಲೈನ್ ನ್ನು ಪ್ರಸ್ತುತತೆಯ ಆಧಾರದಲ್ಲಿ ವಿಂಗಡಿಸುವ ಕ್ರಮ ಕೈಗೊಂಡಿದೆ.
ಪ್ರಸ್ತುತ ಟ್ವಿಟರ್ ನಲ್ಲಿ ಕಾಲಾನುಕ್ರಮದ ಪ್ರಕಾರ ಟೈಮ್ ಲೈನ್ ವಿಂಗಡಿಸಲಾಗುತ್ತಿದೆ. ಗ್ರಾಹಕರ ನ್ಯೂಸ್ ಫೀಡ್ ಗಳಿಗೆ ಟ್ವಿಟರ್ ಸಹ ಫೇಸ್ ಬುಕ್ ಮಾದರಿಯ ಕ್ರಮಾವಳಿಗಳನ್ನು(ಅಲ್ಗಾರಿದಮ್) ಗಳನ್ನು ಬಳಕೆ ಮಾಡಲು ಟ್ವಿಟರ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕಳೆದ ಒಂದು ವರ್ಷದಿಂದ ಟ್ವಿಟರ್ ಕ್ರಮಾವಳಿ(ಅಲ್ಗರಿದಮ್) ಚಾಲಿತ ನ್ಯೂಸ್ ಫೀಡ್ ಗಳನ್ನು ನೀಡುತ್ತಿದ್ದು, ಟ್ವಿಟರ್ ನಲ್ಲಿ ಬದಲಾವಣೆಯ ಭಾಗದಲ್ಲಿ ಒಂದಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಟ್ವಿಟರ್ ಬಳಕೆ ಮಾಡದೇ ಇದ್ದ ಸಂದರ್ಭದಲ್ಲಿ ಮುಖ್ಯವಾದ ಟ್ವಿಟರ್ ಗಳನ್ನು ಗ್ರಾಹಕರು ತಪ್ಪಿಸಿಕೊಳ್ಳುವುದನ್ನು ತಡೆಯಲು ಪ್ರಸ್ತುತತೆಯ ಆಧಾರದಲ್ಲಿ ವಿಂಗಡಿಸುವ ನಿರ್ಧಾರಕ್ಕೆ ಬರಲಾಗಿದೆ.