ನೀವು ಬಳಸ ಬಯಸುವ ಉಪಕರಣಗಳು 
ವಿಜ್ಞಾನ-ತಂತ್ರಜ್ಞಾನ

ನೀವು ಬಳಸ ಬಯಸುವ ಉಪಕರಣಗಳು

ನಮ್ಮ ದೇಹಾರೋಗ್ಯವನ್ನು ಸತತವಾಗಿ ಅವಗಾಹನೆಯಲ್ಲಿಡಲು ಬಂದಿದೆ ಆರ್ಕ್ ಪೆಂಡೆಂಟ್.

ದೇಹದ ಸತತ ಪರೀಕ್ಷೆಗಾಗಿ  ಆರ್ಕ್ ಪೆಂಡೆಂಟ್:
ನಮ್ಮ ದೇಹಾರೋಗ್ಯವನ್ನು ಸತತವಾಗಿ ಅವಗಾಹನೆಯಲ್ಲಿಡಲು ಬಂದಿದೆ ಆರ್ಕ್ ಪೆಂಡೆಂಟ್. ಇದರ ಮೈಕ್ರೋ ಫೋನ್‍ ನ ಸಹಾಯ ದಿಂದ ಈ ಉಪಕರಣದ ನಿಮ್ಮ ಹೃದಯದ ಬಡಿತ, ರಕ್ತದೊತ್ತಡ, ಕ್ಯಾಲೊರಿಗಳ ಲೆಕ್ಕಾಚಾರವನ್ನು ಗ್ರಹಿಸಿ ನಿಮ್ಮ ಸ್ಮಾರ್ಟ್ ಫೋನ್ ಗೆ ರವಾನಿಸುತ್ತದೆ. ಬೆಲೆ-: ಇನ್ನೂ ನಿಗದಿಯಾಗಿಲ್ಲ.

ನಿಮ್ಮ ಕೈದೋಟ ರಕ್ಷಣೆಗೂ ಬಂತೊಂದು ಪರಿಕರ!

ಏರೋ ಗಾರ್ಡನ್ ಸರಣಿಯಲ್ಲಿ ಮಿರಾಕಲ್ ಗ್ರೋ ಕಂಪನಿ ಬಿಡುಗಡೆಗೊಳಿಸಿರುವ
ಈ ಉಪಕರಣ, ನಿಮ್ಮದೇ ಆದ ಕೈತೋಟ ಬೆಳೆಸಲು ಅವಕಾಶ ಕಲ್ಪಿಸಿದೆ. ಇದರ ತಂತ್ರಜ್ಞಾನದಿಂದ ನಿಗದಿತ ಪ್ರಮಾಣದ ನೀರು, ಬೆಳಕು ಇತ್ಯಾದಿಗಳನ್ನು ಹಾಯಿಸಿ, ಕೊತ್ತಂಬರಿ, ಶುಂಠಿ ಮುಂತಾದವು ಬೆಳೆಯಬಹುದು.
ಬೆಲೆ: ರೂ.29,300
ಮನೆಯೊಳಗಿನ ಗಾಳಿಯ ಶುದ್ಧತೆಯ ಮೀಟರ್
ಮನೆಯೊಳಗಿನ ವಾತಾವರಣದ ಶುದ್ಧತೆಯ ಬಗ್ಗೆ ನಿಖರ ಮಾಹಿತಿ
ನೀಡಲು ಬಂದಿದೆ ಸೆನ್ಸ್‍ಲೀ ಕಂಪನಿಯ ಪೋರ್ಟಬಲ್ ಪೋಲ್ಯೂಷನ್ ಸೆನ್ಸರ್.
ಇದರಲ್ಲಿನ ಮೈಕ್ರೋ ಸೆನ್ಸರ್‍ಗಳು ಮನೆಯಲ್ಲಿನ ಆಮ್ಲಜನಕ, ಮತ್ತಿತರ
ಅನಿಲಗಳ ಬಗ್ಗೆ ಮಾಹಿತಿ ನೀಡುತ್ತದೆ. ಬ್ಲೂಟೂತ್ ಮೂಲಕ ಸಂಪರ್ಕ ಸಾಧ್ಯ.
ಬೆಲೆ: ರೂ 5,600
ನೀವು ಮನೆಯಿಂದ ದೂರದಲ್ಲಿದ್ದರೂ, ಮನೆಯಲ್ಲಿರುವ ನಾಯಿಮರಿಯನ್ನು
ಮಾತಾಡಿಸಬಹುದಾದ ಉಪಕರಣವನ್ನು ಪೆಡ್ಜ್‍ಚಾಟ್ಜ್ ಎಂಬ ಕಂಪನಿ ಬಿಡುಗಡೆಗೊಳಿಸಿದೆ. ಇದು ವೀಡಿಯೋ ಫೋನ್ ಆಗಿದ್ದು, ನೀವು ನಿಮ್ಮ ಪೆಟ್‍ಗೆ ಸಮಯಕ್ಕೆ ಸರಿಯಾಗಿ ಸಂದೇಶ ರವಾನಿಸಬಹುದು.
ಬೆಲೆ: ರೂ. 23,400
ಡೈಸನ್ ಕಂಪನಿಯಿಂದ ಬ್ಲೆಡ್ ಲೆಸ್ ಫ್ಯಾನ್
ಫ್ಯಾನ್ ಅಂದ್ರೆ ಅದಕ್ಕೆ ಬ್ಲೇಡ್‍ಗಳು ಇರಲೇಬೇಕೆಂಬ ಕಾಲ ಇನ್ನಿಲ್ಲ. ಹಲವಾರು
ಮೈಕ್ರೋ ಫೋನ್‍ಗಳು ಹಾಗೂ ಸೆನ್ಸರ್‍ಗಳಿಂದಾಗಿರುವ ಈ ಟೇಬಲ್ ಫ್ಯಾನ್ ಗೆ ರೆಕ್ಕೆಗಳಿಲ್ಲ. ಇದರಿಂದ ಹೊರಬರುವ ಗಾಳಿಯ ಪ್ರಮಾಣ ಹಾಗೂ ಗಾಳಿಯ ದಿಕ್ಕನ್ನು
ನಿಯಂತ್ರಿಸಬಹುದು. ಬೆಲೆ-:  ರೂ. 10,600

ಔಟಿಂಗ್ ಗಾಗಿ ಪುಟ್ಟ ಸೋಲಾರ್ ಪ್ಯಾನಲ್

ಪಯಣಿಗರಿಗೆ ತಮ್ಮದೇ ವಿದ್ಯುತ್ ವ್ಯವಸ್ಥೆ ಹೊಂದಿರಲು ಅನುಕೂಲವಾಗುವ ಪೋರ್ಟಬಲ್
ಸೋಲಾರ್ ಪ್ಯಾನಲ್‍ಗಳನ್ನು ಗೋಲಾರ್ ಕಂಪನಿ ತಂದಿದೆ. ಲ್ಯಾಪ್‍ಟಾಪ್, ಡಿವಿಡಿ
ಪ್ಲೇಯರ್ ರನ್ ಮಾಡುವಂಥ ಲಘು ವಿದ್ಯುತ್ತನ್ನು ಇದು ನೀಡುತ್ತದೆ.
ಬೆಲೆ: ರೂ.21,400

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT