ವಿಜ್ಞಾನ-ತಂತ್ರಜ್ಞಾನ

ಗೂಗಲ್ ಟಾಕ್‌ಗೆ ಶೀಘ್ರದಲ್ಲಿ ಗುಡ್ ಬೈ

ನವದೆಹಲಿ: ಗೂಗಲ್ ಟಾಕ್ ಬದಲು ಹೊಸ ಹ್ಯಾಂಗ್ ಔಟ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಲು ಗೂಗಲ್ ಮುಂದಾಗಿದ್ದು ಫೆ.16ರಿಂದ ಗೂಗಲ್ ಟಾಕ್ ಅಧಿಕೃತವಾಗಿ ಬಂದ್ ಆಗಲಿದೆ.

ಗೂಗಲ್ ಟಾಕ್ ಜಾಗಕ್ಕೆ ಹ್ಯಾಂಗ್ ಔಟ್ ಬರಲಿದ್ದು, ಹೊಸ ಅಪ್ಲಿಕೇಷನ್ ಅನ್ನು ಇನ್ಸ್ ಸ್ಟಾಲ್ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಸಂದೇಶವನ್ನು ಕಳುಹಿಸಿದ್ದು, ಫೆ. 16 ರಿಂದ ಆರ್ಕುಟ್ ಜಾಗಕ್ಕೆ ಗೂಗಲ್ ಟಾಕ್ ಸೇರಲಿದೆ. ಬಳಕೆದಾರರು ಉಪಯೋಗಿಸುತ್ತಿರುವ ಗೂಗಲ್ ಟಾಕ್ ಅನ್ನು ಓಪನ್ ಮಾಡಿದರೆ ಹ್ಯಾಂಗ್‌ಔಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸಂದೇಶ ಒಂದು ಕಾಣಸಿಗುತ್ತದೆ. ಈ ಮೂಲಕವೂ ಹೊಸ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಹೊಸ ಆಧುನಿಕ ತಂತ್ರಜ್ಞಾನಗಳು ಬರುತ್ತಿದ್ದು, ಬಳಕೆದಾರರನ್ನು ಆಕರ್ಷಿಸಲು ಪ್ರತಿಷ್ಠಿತ ಕಂಪನಿಗಳು ಮುಗಿಬಿದ್ದಿವೆ. ಈಗಾಗಲೇ ಫೇಸ್‌ಬುಕ್, ವಾಟ್ಸ್ ಅಪ್ ಖ್ಯಾತಿ ಗಳಿಸಿದ್ದು ಇವುಗಳಿಗೆ ಹ್ಯಾಂಗ್ ಔಟ್ ಪೈಪೋಟಿ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

SCROLL FOR NEXT