ವಿಜ್ಞಾನ-ತಂತ್ರಜ್ಞಾನ

ಫೇಸ್‌ಬುಕ್‌ನಲ್ಲಿ 'ದೋಷ' ಪತ್ತೆ ಹಚ್ಚಿದ ತಮಿಳ್ನಾಡು ಟೆಕ್ಕಿಗೆ ರು. 7.8 ಲಕ್ಷ ಬಹುಮಾನ

Rashmi Kasaragodu

ಚೆನ್ನೈ : ನಿಮ್ಮ ಫೇಸ್‌ಬುಕ್ ಆಲ್ಬಂನಲ್ಲಿರುವ  ಫೋಟೋಗಳನ್ನು ಹ್ಯಾಕರ್‌ಗಳು ಯಾವಾಗ ಬೇಕಾದರೂ ಡಿಲೀಟ್ ಮಾಡಬಹುದು. ಕೆಲವು ದಿನಗಳ ಹಿಂದೆ ಈ ರೀತಿಯ ಸಮಸ್ಯೆ ಫೇಸ್‌ಬುಕ್ ನಲ್ಲಿ ಕಾಣಿಸಿಕೊಂಡಿತ್ತು. ಈ ರೀತಿ ಹ್ಯಾಕರ್‌ಗಳು ಫೋಟೋ ಡಿಲೀಟ್ ಮಾಡುವುದಕ್ಕೆ ಫೇಸ್‌ಬುಕ್ ಸೆಕ್ಯೂರಿಟಿ ಸೆಟ್ಟಿಂಗ್‌ನಲ್ಲಿರುವ 'ಬಗ್‌' (ದೋಷ) ಕಾರಣವಾಗಿತ್ತು.

ಈ ದೋಷವನ್ನು ಫೇಸ್‌ಬುಕ್ ಸರಿಮಾಡಿಕೊಂಡಿದೆ. ಫೇಸ್‌ಬುಕ್‌ನಲ್ಲಿರುವ ಈ ದೋಷವನ್ನು ಪತ್ತೆ ಹಚ್ಚಿದ್ದು  ತಮಿಳ್ನಾಡಿನ ದೇವನ್‌ಕೋಟೈ ಮೂಲದ ಲಕ್ಷಣ್ ಮುತ್ತಯ್ಯ ಎಂಬ ವೆಬ್ ಡೆವೆಲಪರ್. ದೋಷ ಪತ್ತೆ ಹಚ್ಚಿದ್ದು ಮಾತ್ರವಲ್ಲದೆ ಅದನ್ನು ಇಲ್ಲದಂತೆ ಮಾಡುವ ಸುಲಭ ವಿಧಾನವನ್ನೂ ಲಕ್ಷಣ್ ಫೇಸ್‌ಬುಕ್‌ಗೆ ಹೇಳಿಕೊಟ್ಟಿದ್ದಾರೆ.

ಲಕ್ಷಣ್‌ರ ಈ ಸಹಾಯಕ್ಕಾಗಿ ಫೇಸ್‌ಬುಕ್ ಇವರಿಗೆ 12,500 ಡಾಲರ್ (ಸರಿಸುಮಾರು 7.8 ಲಕ್ಷ ರು.) ಬಹುಮಾನವನ್ನು ನೀಡಿ ಗೌರವಿಸಿದೆ.

ಒಂದು ವಾರದ ಹಿಂದೆಯಷ್ಟೇ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿರುವ ಬಗ್ ಬಗ್ಗೆ ಲಕ್ಷ್ಮಣ್ ಫೇಸ್‌ಬುಕ್‌ಗೆ ವಿವರ ತಿಳಿಸಿದ್ದರು. ಇದಕ್ಕೆ ಥ್ಯಾಂಕ್ಸ್ ಹೇಳಿ ಫೇಸ್‌ಬುಕ್ ಬಹುಮಾನದ ವಿವರಗಳನ್ನೂ ಲಕ್ಷ್ಮಣ್‌ಗೆ ಇಮೇಲ್ ಮಾಡಿತ್ತು.

SCROLL FOR NEXT