ವಿಜ್ಞಾನ-ತಂತ್ರಜ್ಞಾನ

ಡೈನೋಸರ್ ನಾಶಕ್ಕೆ ಆಕಾಶಕಾಯಗಳ ಅಪ್ಪಳಿಕೆಯೇ ಕಾರಣ

Rashmi Kasaragodu

ವಾಷಿಂಗ್ಟನ್: ಯುರೋಪ್‌ನಲ್ಲಿ 66 ಮಿಲಿಯನ್ ವರ್ಷಗಳ ಹಿಂದೆ ವಾಸವಾಗಿದ್ದ ಡೈನೋಸರ್‌ಗಳ ನಾಶಕ್ಕೆ ಆಕಾಶಕಾಯಗಳ ಆಘಾತಗಳೇ ಕಾರಣ ಎಂದು ಪಳೆಯುಳಿಕೆಗಳ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.

ಆಕಾಶಕಾಯಗಳ ಅಪ್ಪಳಿಕೆಯಿಂದಲೇ ಡೈನೋಸರ್‌ಗಳ ಸಂತತಿ ನಾಶವಾಯಿತು ಎಂದು ಹೇಳಲಾಗುತಿದ್ದು, ಕೊನೆಯ ಪಳೆಯುಳಿಕೆ ಉತ್ತರ ಅಮೆರಿಕದಲ್ಲಿ ಲಭ್ಯವಾಗಿತ್ತು. 145.0 ಮಿಲಿಯನ್ ಹಿಂದಿನ ವರ್ಷದಲ್ಲಿ ಆರಂಭವಾಗಿ 66 ಮಿಲಿಯನ್ ವರ್ಷಗಳಲ್ಲಿ ಕೊನೆಗೊಂಡಿರುವ ಕ್ರೆಟೇಶಸ್ ಅವಧಿಯಲ್ಲಿ ಡೈನೋಸರ್‌ನ ಕೊನೆಯ ಸಂತತಿಗಳು ಬದುಕಿದ್ದವು.

ಕಳೆದ 2 ದಶಕಗಳಿಂದ ಯುರೋಪಿಯನ್ ಡೈನೋಸರ್‌ಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಬಂದಿದೆ. ಕ್ರೆಟೇಶಸ್ ಅವಧಿಯಲ್ಲಿನ ಡೈನೋಸರ್‌ಗಳು ಸ್ಪೇನ್, ಫ್ರಾನ್ಸ್, ರೊಮೇನಿಯಾ ಮತ್ತು ಇತರ ರಾಷ್ಟ್ರಗಳಲ್ಲಿ ಕಂಡುಬಂದಿವೆ.

ಯುರೋಪಿನಲ್ಲಿನ  ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಡೈನೋಸರ್ ಸಂತತಿ ನಾಶವಾಯಿತು ಎಂದು ಬುಚಾರೆಸ್ಟ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳಿದ್ದಾರೆ.

ಕ್ರೆಟೇಶಸ್ ಅವಧಿಯ ಡೈನೋಸರ್‌ಗಳಲ್ಲಿ ಬಹುತೇಕ ಡೈನೋಸರ್‌ಗಳು ಸಸ್ಯಹಾರಿಗಳಾಗಿದ್ದವು. ನೂರು ಸಾವಿರ ವರ್ಷಗಳ ಹಿಂದೆ ಆಕಾಶಕಾಯಗಳು ಅಪ್ಪಳಿಸಿದರ ಪರಿಣಾಮ ಇವುಗಳ ಸಂತತಿ ನಿರ್ನಾಮವಾಯಿತು ಎಂದು ಪಳೆಯುಳಿಕೆ ಸಂಶೋಧಕರು ಕಂಡುಹಿಡಿದಿದ್ದಾರೆ.

SCROLL FOR NEXT