ಲಂಡನ್: ಕೆಲ ದಿನಗಳ ಹಿಂದೆ ಬಾಹ್ಯಾಕಾಶದಲ್ಲಿ ಕಂಡುಬಂದ 'ದೆವ್ವ ಕಣ' ಅನ್ಯ ಗ್ರಹ ಜೀವಿಗಳು ಅಸ್ತಿತ್ವದಲ್ಲಿದ್ದವು ಎಂಬುದಕ್ಕೆ ಸಾಕ್ಷಿಯಾಗಿದೆ ಎ0ದು ಶೆಫೀಲ್ಡ್ ವಿಶ್ವ ವಿದ್ಯಾನಿಲಯ ಮತ್ತು ಬಕಿಂಗ್ಹ್ಯಾಮ್ ಸೆಂಟರ್ ಫಾರ್ ಆಸ್ಟ್ರೋಬಯಾಲಜಿಯ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ವರ್ಷನುಗಟ್ಟಲೆ ಈ ರೀತಿಯ ಸಾಕ್ಷಿಗಳಿಗಾಗಿ ಕಾಯುತ್ತಿದ್ದು, ಇದೀಗ ದೆವ್ವಕಣದ ರೂಪದಲ್ಲಿ ಸಾಕ್ಷಿ ಸಿಕ್ಕಿದೆ ಎನ್ನುವ ವಾದ ಸಂಶೋಧಕರದ್ದು.
ಭೂಮಿಯಿಂದ 27 ಕಿ.ಮೀ ದೂರದಲ್ಲಿನ ಸ್ಟ್ರೇಟೋಸ್ಪಿಯರ್ನಲ್ಲಿ ದೆವ್ವ ಕಣ ಪತ್ತೆಯಾಗಿತ್ತು. ಕಳೆದ ವರ್ಷ ಭೂಮಿಯಿಂದ ಇಲ್ಲಿಗೆ ಬಲೂನ್ಗಳನ್ನು ಕಳುಹಿಸಿ ಆ ಕಣಗಳನ್ನು ಸಂಗ್ರಹಿಸಲಾಗಿತ್ತು.
ಶಿಫಾನ್ ಸ್ಕಾರ್ಫ್ನಂತೆ ತೋರುವ ಮನುಷ್ಯನ ತಲೆಕೂದಲಿನಷ್ಟು ತೆಳುವಾದ ದೆವ್ವದಂತೆ ಕಾಣುವ ಆಕೃತಿ ಸ್ಟ್ರೆಟೋಸ್ಫಿಯರ್ನಲ್ಲಿ ಪತ್ತೆಯಾಗಿತ್ತು. ಆದಾಗ್ಯೂ, ಅನ್ಯಗ್ರಹ ಜೀವಿಯ ಸೂಕ್ಷ್ಮದರ್ಶಕ ಜೀವಿಗಳೇ ಬಾಹ್ಯಾಕಾಶದಲ್ಲಿ ಹಾರಾಡುತ್ತಿದ್ದು ಇದು ದೆವ್ವಕಣದಂತೆ ಗೋಚರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.