ವಿಜ್ಞಾನ-ತಂತ್ರಜ್ಞಾನ

ತೂಕ ಕಡಿಮೆ ಮಾಡಿಕೊಳ್ಳಲು ಫೇಸ್ ಬುಕ್ ಸಹಾಯಕಾರಿ!

Srinivas Rao BV

ನ್ಯೂಯಾರ್ಕ್: ಫೇಸ್ ಬುಕ್ ಸ್ನೇಹಿತರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮಾತ್ರವೇ ಸಹಕಾರಿಯಾಗಿರದೆ ತೂಕ ಇಳಿಸಿಕೊಳ್ಳುವುದರಲ್ಲೂ ನೆರವಾಗಲಿದೆಯಂತೆ.

ಅಮೆರಿಕಾದ ಉತ್ತರ ಕೆರೊಲಿನಾದಲ್ಲಿ ನಡೆದ ಸಂಶೋಧನೆ ಪ್ರಕಾರ, ಫೇಸ್ ಬುಕ್ ಉಪಯೋಗಿಸದ ಯುವ ಮಹಿಳೆಯರು ಫೇಸ್ ಬುಕ್ ಉಪಯೋಗಿಸುವ ಮಹಿಳೆಯರಿಗಿಂತಲೂ ಹೆಚ್ಚು ತೂಕ ಹೊಂದುತ್ತಾರೆ ಎಂದು ತಿಳಿದುಬಂದಿದೆ. ಅತಿ ಹೆಚ್ಚು ಫೇಸ್ ಬುಕ್ ಬಳಕೆ ಮಾಡುವುದರಿಂದ ಹೆಚ್ಚು ತಿನ್ನುವುದು ಹಾಗೂ ತೂಕ ಹೆಚ್ಚಿಸಿಕೊಳ್ಳುವುದನ್ನು ತಡೆಗಟ್ಟಬಹುದು ಎಂದು ಸಂಶೋಧನಾ ವರದಿ ತಿಳಿಸಿದೆ.

ಭಾವನಾತ್ಮಕವಾಗಿ ಫೇಸ್ ಬುಕ್ ನಲ್ಲಿ ತೊಡಗಿಸಿಕೊಳ್ಳುವ ಕಾಲೇಜು ವಿದ್ಯಾರ್ಥಿನಿಯರು ದೇಹದ ಗಾತ್ರ ಹಾಗೂ ಡಯೆಟ್ ಮಾಡುವುದರಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಮನೋವೈದ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಸ್ಟಿಫೇನಿ ಹೇಳಿದ್ದಾರೆ.

128  ಕಾಲೇಜು ವಯಸ್ಸಿನ ಯುವತಿಯರನ್ನು ಸಮೀಕ್ಷೆಗೊಳಾಪಡಿಸಲಾಗಿದ್ದು, ಇದರಲ್ಲಿ ಮಹಿಳೆಯರು ಫೇಸ್ ಬುಕ್ ನೊಂದಿಗೆ ಹೊಂದಿರುವ ಭಾವನಾತ್ಮ ಸಂಬಂಧದ ಬಗ್ಗೆ ಹಾಗೂ ಅದರಿಂದ ದಿನನಿತ್ಯದ ಜೀವನದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ವೇಳೆ ಬಹುತೇಕ ಮಂದಿ ಫೇಸ್ ಬುಕ್ ನ್ನು ಅತಿ ಹೆಚ್ಚು ಉಪಯೋಗಿಸುವುದರಿಂದ ತೂಕ ಕಡಿಮೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಅಪಾಯಕಾರಿ ಡಯಟ್ ನಿಂದ ದೂರವಿರಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT