ಬೀಜಿಂಗ್: ಚೀನಾ, ಸ್ವೀಡನ್ ಮತ್ತು ಅಮೆರಿಕದ ವಿಜ್ಞಾನಿಗಳು ಅತಿ ಹೆಚ್ಚುಉತ್ಪಾದಕತೆ ಹೊಂದಿರುವ, ಪ್ರಮುಖ ಹಸಿರುಮನೆ ಅನಿಲ ಮೀಥೇನ್ ಹೊರಸೂಸುವಿಕೆ ಕಡಿತಗೊಳಿಸುವ ಕುಲಾಂತರಿ ಅಕ್ಕಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.
ಸನ್ ಚುಆಕ್ಸಿನ್ ಮತ್ತು ಅವರ ಸಹೋದ್ಯೋಗಿಗಳು ಬಾರ್ಲಿ ಜೀನ್‍ನ್ನು ಅಕ್ಕಿಗೆ ಸಂಯೋಜನೆಗೊಳಿಸುವ ಈ ಹೊಸ ಅಕ್ಕಿ `ಸುಬಿರಾ2' ಅಭಿವೃದ್ಧಿಪಡಿಸಿದ್ದಾರೆ. ಈ ಅಕ್ಕಿ ಅತಿ ಹೆಚ್ಚು ಪಿಷ್ಟ ಹೊಂದಿರಲಿದೆ ಎಂದು ಕ್ಸಿನ್‍ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಅಭಿವೃದ್ಧಿಯಿಂದ ಎರಡು ರೀತಿಯ ಉಪಯೋಗಗಳಿವೆ. ಮೊದಲನೆಯದಾಗಿ ಪರಿಸರ ಹಾನಿಯನ್ನು ತಡೆಯಬಹುದು ಮತ್ತು ಧಾನ್ಯಗಳ ಉತ್ಪಾದಕತೆ ಹೆಚ್ಚಲಿದೆ ಎಂದು ಸನ್ ಹೇಳಿದ್ದಾರೆ.