ಮೋಟೋ ಜಿ (ಮೂರನೇ ಜನರೇಷನ್) ಫೋನ್‌ 
ವಿಜ್ಞಾನ-ತಂತ್ರಜ್ಞಾನ

ಭಾರತದಲ್ಲೀಗ ಮೋಟೋ ಜಿ ಅಲೆ

ಮೋಟೋರೋಲಾ ಕಂಪನಿಯ ಮೋಟೋ ಜಿ (ಮೂರನೇ ಜನರೇಷನ್) ಫೋನ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ...

ಮೋಟೋರೋಲಾ ಕಂಪನಿಯ ಮೋಟೋ ಜಿ (ಮೂರನೇ ಜನರೇಷನ್)  ಫೋನ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಕಳೆದ ವಾರ ಮೋಟೋರೋಲಾ ಈ ಫೋನ್ ಗಳನ್ನು ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 4ಜಿ ಎಲ್‌ಇಡಿ ಫೋನ್‌ಗೆನ ಡಿಸ್‌ಪ್ಲೇ  5 ಇಂಚು ಇದೆ.  ಮೋಟೋರೋಲಾ ಮೊಬೈಲ್‌ಗೆ ಭಾರತೀಯರು ನೀಡಿದ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದ ಸೂಚಕವಾಗಿ ಮೊದಲ ಬಾರಿಗೆ ಮೋಟೋರೋಲಾ ತಮ್ಮ  ಮೋಟೋ ಜಿ - ಮೂರನೇ ಜನರೇಷನ್ ಫೋನ್ ನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಮೋಟೋ ಜಿ ಮೂರನೇ ಜನರೇಷನ್ ಫೋನ್‌ಗಳು ಎರಡು ರೀತಿಯಲ್ಲಿವೆ. ಒಂದರಲ್ಲಿ 1 ಜಿಬಿ ರ್ಯಾಮ್, 8 ಜಿಬಿ ಇಂಟರ್ನಲ್ ಮೆಮೊರಿ ಇದ್ದರೆ ಇನ್ನೊಂದು ರೀತಿಯ ಫೋನ್  ನಲ್ಲಿ 2 ಜಿಬಿ ರ್ಯಾಮ್,  16 ಜಿಬಿ ಇಂಟರ್ನಲ್ ಮೆಮೊರಿ ಇದೆ. ಇದಲ್ಲಿ 1 ಜಿಬಿ ರ್ಯಾಮ್ ಮಾಡೆಲ್‌ಗೆ 11, 999 ರು ಹಾಗೂ 2 ಜಿ ರ್ಯಾಮ್ ಮೊಬೈಲ್‌ಗೆ  12,999 ರು. ಬೆಲೆಯಿದೆ.

ಮೋಟೋರೋಲಾ 3ಜಿ  ಫೋನ್ ನ ವಿಶೇಷತೆಗಳು
720  ಈ್ಗ  1280 ಪಿಕ್ಸೆಲ್ ರೆಸಲ್ಯೂಷನ್ ಇರರುವ 5 ಇಂಚು ಇನ್‌ಪ್ಲೇನ್ ಸ್ವಿಚ್ಚಿಂಗ್ (ಐಪಿಎಸ್)  ಡಿಸ್‌ಪ್ಲೇ.
ಡಿಸ್‌ಪ್ಲೇಗೆ  ಗೊರಿಲ್ಲಾ ಗ್ಲಾಸ್  2 ರಕ್ಷಣೆ
2 ಸಿಮ್ ಗಳಿರುವ ಫೋನ್‌ನಲ್ಲಿ ಎರಡೂ ಸಿಮ್‌ಗಳಿಗೆ 4 ಜಿ ಸೌಲಭ್ಯ
64 ಬಿಟ್ ಕ್ವಾಡ್ ಕೋರ್ ಸ್ಟಾಪ್ ಡ್ರಾಗನ್ 410 ಪ್ರೊಸೆಸರ್
ಮೆಮೊರಿ ವರ್ಧಿಸಲು (ಹಿಗ್ಗಿಸಲು ) ಮೈಕ್ರೋ ಎಸ್‌ಡಿ

ಆ್ಯಂಡ್ರಾಯ್ಡ್ 5.1 ಆಪರೇಟಿಂಗ್ ಸಿಸ್ಟಂನ್ನು ಮೋಟೋರೋಲಾ ಫೋನ್‌ಗಳಿಗಾಗಿ ಕಸ್ಟಮೈಸ್ ಮಾಡಿರುವ ವೆನಿಲ್ಲಾ  ವರ್ಷನ್‌ನಲ್ಲಿ ಮೋಟೋ ಜೀ ಮೂರನೇ ಜನರೇಶನ್ ಕಾರ್ಯವೆಸಗುತ್ತದೆ.  ಬಿಳಿ ಹಾಗೂ ಕಪ್ಪು ಬಣ್ಣ ಗಳಲ್ಲಿ ಲಭ್ಯವಾಗುವ ಈ ಫೋನ್ ಆಗಸ್ಟ್ 2ರ ವರೆಗೆ ಹಲವಾರು ಆಫರ್ ನೊಂದಿಗೆ ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯವಾಗುತ್ತಿದೆ.

ಈ ಫೋನ್‌ನೊಂದಿಗೆ ಏರ್‌ಟೆಲ್ 4 ಜಿ ಸಿಮ್ ಉಚಿತವಾಗಿ ಸಿಗುತ್ತದೆ.

ಒಂದು ಮೀಟರ್ ಆಳವಿರುವ ನೀರಿನ ಹೊಂಡದಲ್ಲಿ ಫೋನ್ ಬಿದ್ದು ಅಲ್ಲೇ 30 ನಿಮಿಷ ಇದ್ದರೂ ಫೋನ್‌ನೊಳಗೆ ನೀರು ಹೋಗದಂತಿರುವ ವಾಟರ್ ರೆಸಿಸ್ಟೆಂಟ್ ಪವರ್ ಇದಕ್ಕಿದೆ.

ಮೋಟೋ ಜಿ ಸೆಕೆಂಡ್ ಜನರೇಷನ್ ಫೋನ್ ಗಿಂತ ಹೆಚ್ಚು ಬ್ಯಾಟರಿ ಬ್ಯಾಕಪ್ ಈ ಫೋನ್‌ಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dr. Vishnuvardhan Memorial: ವಿಷ್ಣು ಸಮಾಧಿ ಕೆಡವಿದ ಬಾಲಕೃಷ್ಣ ಕುಟುಂಬಕ್ಕೆ ಸರ್ಕಾರ ಶಾಕ್!, Abhiman Studio ಭೂಮಿ 'ಅರಣ್ಯ' ಎಂದು ಘೋಷಣೆ?

India-Japan Economic Forum: ಭಾರತದಲ್ಲಿ ಬಂಡವಾಳ ಕೇವಲ ಬೆಳೆಯುವುದಲ್ಲ, ಅದು ದುಪ್ಪಟ್ಟಾಗುತ್ತದೆ- ಪ್ರಧಾನಿ ಮೋದಿ ಮಾತು

Mysuru Dasara 2025: ಒರಿಜನಲ್ Booker Prize ವಿಜೇತರು Banu Mushtaq ಅಲ್ಲ.. ದೀಪಾ ಬಸ್ತಿ? ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಹೇಳಿದ್ದೇನು?

ದಾವಣಗೆರೆ: ಗಣೇಶಮೂರ್ತಿ ಬಳಿ ಆಕ್ಷೇಪಾರ್ಹ ಫ್ಲೆಕ್ಸ್‌ ; ಪರಿಸ್ಥಿತಿ ಉದ್ವಿಗ್ನ, ವಾದ-ವಿವಾದದ ಬಳಿಕ ತೆರವು!

ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತಕ್ಕೆ ಕಾರಣವೇನು: ಬೆಸ್ಕಾಂ ಅಧಿಕಾರಿಗಳು ಏನಂತಾರೆ?

SCROLL FOR NEXT