ವಿಜ್ಞಾನ-ತಂತ್ರಜ್ಞಾನ

ಕನ್ನಡವೂ ಸೇರಿದಂತೆ ಈಗ ಆರು ಭಾರತೀಯ ಭಾಷೆಗಳಲ್ಲಿ ಟ್ವಿಟ್ಟರ್ ಲಭ್ಯ

Guruprasad Narayana

ಮುಂಬೈ: ಜನಪ್ರಿಯ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಈಗ ಹೆಚ್ಚಿನ ನಾಲ್ಕು ಭಾರತೀಯ ಭಾಷೆಗಳನ್ನು ತನ್ನ ತಾಣಕ್ಕೆ ಸೇರಿಸಿರುವುದಾಗಿ ಘೋಷಿಸಿದೆ.

"ಇಂದು ಟ್ವಿಟ್ಟರ್ ಅನ್ನು ಗುಜರಾತಿ, ಕನ್ನಡ, ಮರಾಠಿ ಮಾತು ತಮಿಳು ಭಾಷೆಗಳಲ್ಲಿ ಸಿಗುವಂತೆ ಮಾಡಿದ್ದೇವೆ ಅಲ್ಲದೆ ಟ್ವಿಟ್ಟರ್.ಕಾಂ ಹಾಗೂ ಆಂಡ್ರಾಯ್ಡ್ ಆಪ್ ಗಳಲ್ಲಿ ಈ ಭಾಷೆಗಳು ದೊರೆಯುವಂತೆ ಅಪ್ಡೇಟ್ ಮಾಡಿದ್ದೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಬಳಕೆದಾರರು ಯಾವುದೇ ಭಾಷೆಯಲ್ಲಾದರೂ ಟ್ವೀಟ್ ಮಾಡಬಹುದಿತ್ತಾಗಿದ್ದರೂ, ಬಳಕೆಯ ಇಂಟರ್ಫೇಸ್ ಈ ವರೆಗೂ ಎರಡೆ ಭಾರತೀಯ ಭಾಷೆಗಳನ್ನು (ಹಿಂದಿ ಮತ್ತು ಬೆಂಗಾಲಿ) ಒಳಗೊಂಡಿತ್ತು.

ಈಗ ಈ ಹೆಚ್ಚುವರಿ ನಾಲ್ಕು ಭಾಷೆಗಳನ್ನು ಸೇರಿಸಿದ್ದು ಈ ಭಾಷೆಗಳಲ್ಲಿ ಟ್ರೆಂಡಿಂಗ್ ವಿಷಯಗಳು, ಹುಡುಕುವುದು, ಹ್ಯಾಂಡಲ್ ಗಳು ಲಭ್ಯವಾಗಲಿವೆ. ಸೆಟ್ಟಿಂಗ್ಸ್ ನಲ್ಲಿ ಭಾಷಾ ಆಯ್ಕೆಯನ್ನು ಬಳಕೆದಾರರು ಬದಲಾಯಿಸಬಹುದಾಗಿದೆ.

ಟ್ವಿಟ್ಟರ್ ಬಳಕೆದಾರರ ಸಮುದಾಯ ಈ ನಾಲ್ಕು ಭಾಷೆಗಳಲ್ಲಿ ಟ್ವಿಟ್ಟರ್ ಬಳಕೆಯ ಇಂಟರ್ಫೇಸ್ ಅನ್ನು ಅನುವಾದ ಮಾಡಲು ಸಹಾಯ ಮಾಡಿದೆ.

SCROLL FOR NEXT