ವಿಜ್ಞಾನ-ತಂತ್ರಜ್ಞಾನ

೧೯೯ ದಿನಗಳ ನಂತರ ಧರೆಗಿಳಿಯಲಿರುವ ಐ ಎಸ್ ಎಸ್ ತಂಡ

Guruprasad Narayana

ವಾಶಿಂಗ್ಟನ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ (ಐ ಎಸ್ ಎಸ್) ಮೂರು ಬಾಹ್ಯಾಕಾಶ ಪ್ರಯಾಣ ತಂಡದ ೪೩ ಜನರು ೧೯೯ ದಿನಗಳ ನಂತರ ಗುರುವಾರ ಧರೆಗೆ ಇಳಿಯಲಿದ್ದಾರೆ.

ಕಮ್ಯಾಂಡರ್ ಟೆರ್ರಿ ವರ್ಟ್ಸ್ ಮತ್ತು ಯಾನದ ಎಂಜಿನಿಯರ್ ಗಳಾದ ಆಂಟನ್ ಸ್ಕಲ್ಪ್ರೋವ್ ಮತ್ತು ಸಮಾಂತ ಕ್ರಿಸ್ಟೋಫರೆಟ್ಟಿ ಅವರು ಬಾಹ್ಯಾಕಾಶಯಾನ ಸೋಯಜ್ ಟಿ ಎಂ ಎ-೧೫ ಎಂ ಏರಿ ಭಾರತೀಯ ಸಮಯ ಸಂಜೆ ೭:೧೩ಕ್ಕೆ ಕಜಕಿಸ್ಥಾನದಲ್ಲಿ ಇಳಿಯಲಿದ್ದಾರೆ.

ಐ ಎಸ್ ಎಸ್ ನಿಯಂತ್ರಣವನ್ನು ವರ್ಟ್ಸ್ ಅವರು ಖ್ಯಾತ ಕಾಸ್ಮೋನಾಟ್ ಜೆನ್ನಡಿ ಪಡಲ್ಕ ಅವರಿಗೆ ವಹಿಸಿಕೊಟ್ಟಿದ್ದಾರೆ.

ಮೇ ೧೩ ಕ್ಕೆ ಬಂದಿಳಿಯಬೇಕಿದ್ದ ಈ ತಂಡದ ಹಿಂದಿರುಗುವಿಕೆಯನ್ನು, ಏಪ್ರಿಲ್ ನಲ್ಲಿ ರಷ್ಯಾದ ರಾಕೆಟ್ ಒಂದು ಕೆಲಸ ಮಾಡಲು ಸಾಧ್ಯವಾಗದ್ದರಿಂದ ಒಂದು ತಿಂಗಳವರೆಗೆ ವಿಸ್ತರಣೆ ಮಾಡಲಾಗಿತ್ತು.

ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಖಗೋಳ ಶಾಸ್ತ್ರಜ್ಞೆ ಕ್ರಿಸ್ಟೋಫರೆಟ್ಟಿ ಈಗ ಹೊಸ ಬಾಹ್ಯಾಕಾಶ ದಾಖಲೆ ನಿರ್ಮಿಸಿದ್ದಾರೆ.

೨೦೦೬-೨೦೦೭ ರಲ್ಲಿ ೧೯೫ ದಿನ ಬಾಹ್ಯಾಕಾಶದಲ್ಲಿ ತಂಗಿದ್ದ ಭಾರತೀಯ ಮೂಲದ ನಾಸಾ ಖಗೋಳ ಶಾಸ್ತ್ರಜ್ಞೆ ಸುನಿತಾ ವಿಲ್ಲಿಯಮ್ಸ್ ಅವರ ದಾಖಲೆಯನ್ನು ಅಳಿಸಿ ಹಾಕಿ ವಿಶ್ವದ ಅತಿ ಹೆಚ್ಚು ಅನುಭವವುಳ್ಳ ಖಗೋಳಶಾಸ್ತ್ರಜ್ಞೆ ಎನ್ನಿಸಿಕೊಂಡಿದ್ದಾರೆ.

ಪುರುಷರಲ್ಲಿ ೧೯೯೫-೯೫ ರ ವೇಳೆಯಲ್ಲಿ ೪೩೮ ದಿನ ಬಾಹ್ಯಾಕಾಶದಲ್ಲಿ ತಂಗಿದ್ದ ಕಾಸ್ಮೋನಾಟ್ ವಾಲೆರಿ ಪೋಲ್ಯಾಕೋವ್ ಅವರದ್ದೇ ದಾಖಲೆ.

ಈಗ ನಾಸಾ ಖಗೋಳಶಾಸ್ತ್ರಜ್ಞ ಸ್ಕಾಟ್ ಕೆಲ್ಲಿ ಮತ್ತು ೪೪ ಬಾಹ್ಯಾಕಾಶ ಪಯಣದ ಕಮ್ಯಾಂಡರ್ ಪಡಲ್ಕ ಹಾಗು ಕಾಸ್ಮೋನಾಟ್ ಮೈಕೆಲ್ ಕಾರಿಯೋಂಕೊ ಒಂದು ವರ್ಷಪೂರ್ತಿ ಬಾಹ್ಯಾಕಾಶದಲ್ಲಿ ತಂಗಿ ಗಾಳಿಭಾರದಲ್ಲಿ ಬದುಕುವ ಹಾಗು ಬಾಹ್ಯಾಕಾಶ ಕಿರಣಗಳಿಗೆಒಡ್ಡಿಕೊಳ್ಳುವುದರಿಂಡಾಗುವ ಧೀರ್ಘ ಕಾಲದ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ಸಂಶೋಧಕರಿಗೆ ಸಹಕರಿಸಲಿದ್ದಾರೆ.

SCROLL FOR NEXT