ನೀವು ಮೂಡಿನಾ? ಒಂದೊಂದು ಸಲ ಒಂದೊಂದು ಥರ ಇರ್ತೀರಾ? ನಿಮ್ಮಂಥವರಿಗಾಗಿಯೇ ಈಗ ಬಂದಿದೆ 'ಥಿಂಕ್' ಎಂಬ ವಿಯರೇಬಲ್ ಡಿವೈಸ್. ಇದನ್ನು ಕೂದಲ ಸಂದಿಯಿಂದ ಕಿವಿಗೆ ಸಿಕ್ಕಿಸಿಕೊಂಡು, ನಿಮ್ಮ ಐಫೋನ್‌ನಲ್ಲಿ ಈ ಡಿವೈಸ್ ಕಂಪನಿಯ ಥಿಂಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಸಾಕು. ನಿಮ್ಮಿಷ್ಟದ ಮೂಡ್ ಅನ್ನು ನೀವು ಹೊಂದಬಹುದು.
ಆಲ್ಕೋ ಹಾಲ್ ಕುಡಿಯದೇ ಅಂಥ ಸಂತೋಷಕ್ಕೆ ನಿಮ್ಮನ್ನು ತಳ್ಳಿಕೊಳ್ಳಬಹುದು. ಯಾವುದೇ ಸಂಗೀತ ಕೇಳದೆ ನೀವು ಅಂಥ ಆನಂದಕ್ಕೆ ಅರ್ಪಿಸಿಕೊಳ್ಳಬಹುದು. ಐದು ನಿಮಿಷ ಜಾಲಿಯಾಗಿ, ಮತ್ತೈದು ನಿಮಿಷ ಸಿಟ್ಟಿನಲ್ಲೂ ನೀವಿರಬಹುದು. ಎಲ್ಲ ಆಯ್ಕೆಗಳು ಇಲ್ಲಿವೆ.
ಈ ಡಿವೈಸನ್ನೀಗ ಪ್ರಾಯೋಗಿಕವಾಗಿ ಹಾರ್ವರ್ಡ್ ಎಂಐಟಿ ಹುಡುಗರು ಪರಿಚಯಿಸಿದ್ದಾರೆ. ಇದರ ಅಭಿವೃದ್ಧಿಗೆ 15 ಮಿಲಿಯನ್ ಡಾಲರ್ ಖರ್ಚಾಗಿದೆ. ಈ ಡಿವೈಸ್‌ನ ವರ್ತನೆಗೂ ಮೆದುಳಿನ ನರಗಳು ರವಾನಿಸುವ ಸಂಜ್ಞೆಗೂ ಜಾಸ್ತಿಯೇನು ವ್ಯತ್ಯಾಸ ಇರೋದಿಲ್ವಂತೆ.
ಇದು ಮೆದುಳಿಗೆ ನೈಜ ಎಲೆಕ್ಟ್ರಿಕ್ ಸಿಗ್ನಲ್ ರವಾನಿಸುವ ಡಿವೈಸ್ ಎನ್ನುತ್ತದೆ ಸಂಶೋಧಕರ ತಂಡ. ತೀರಾ ಬೇಸರ ಆದಾಗ ಅಳುವುದಕ್ಕೂ ಈ ಡಿವೈಸ್ ನೆರವಾಗುತ್ತದಂತೆ.