ವಾಷಿಂಗ್ ಟನ್ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನ್ನು ಪರೀಕ್ಷಾರ್ಥವಾಗಿ ಬಳಸುವವರಿಗೆ ಅಂತಿಮ ಆವೃತ್ತಿಯನ್ನು ಉಚಿತವಾಗಿ ನೀಡುವುದಾಗಿ ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ.
ವಿಂಡೋಸ್ 10 ಮುನ್ನೋಟ(preview) ಡೌನ್ ಲೋಡ್ ಮಾಡಿ ವಿಂಡೋಸ್ ಇನ್ಸೈಡರ್ ಪ್ರೋಗ್ರಾಂ ನಲ್ಲಿರುವ ಮೈಕ್ರೋ ಸಾಫ್ಟ್ ಖಾತೆಯನ್ನು ಬಳಸುವವರಿಗೆ ವಿಂಡೋಸ್ ನ ನೂತನ ಆವೃತ್ತಿ ಉಚಿತವಾಗಿ ಸಿಗಲಿದೆ. ಈಗಲೇ ವಿಂಡೋಸ್ 10 ಮುನ್ನೋಟವನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವಿದ್ದು, ಅಧಿಕೃತವಾಗಿ ಬಿಡುಗಡೆಯಾದ ನಂತರ ಅದನ್ನು ಅಪ್ ಗ್ರೇಡ್ ಮಾಡಿಕೊಳ್ಳಬಹುದಾಗಿದೆ ಎಂದು ಮೈಕ್ರೋ ಸಾಫ್ಟ್ ತಿಳಿಸಿದೆ.
ಮೈಕ್ರೋ ಸಾಫ್ಟ್ ಗೇಬ್ ಅಲು ಈ ಯೋಜನೆಯನ್ನು ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದು ವಿಂಡೋಸ್ 10 ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಹೊಸ ಬದಲಾವಣೆಗಳ ಬಗ್ಗೆ ತಿಳಿಸಿದ್ದಾರೆ.