ವಿಜ್ಞಾನ-ತಂತ್ರಜ್ಞಾನ

ಅಕೌಂಟ್ ಇಲ್ಲದೆ ಫೇಸ್ ಬುಕ್ ಮೆಸೆಂಜರ್ ಆ್ಯಪ್ ಬಳಸಿ!

ಫೇಸ್ ಬುಕ್ ಇತ್ತೀಚಿನ ದಿನಗಳಲ್ಲಿ ಯುವಕರು ಅತೀ ಹೆಚ್ಚು ಸಮಯ ಕಳೆಯುವ ತಾಣವಾಗಿದ್ದು, ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಫೇಸ್ ಬುಕ್ ಸಂಸ್ಥೆ ಇದೀಗ ಚಾಟಿಂಗ್ ಆ್ಯಪ್ ಗಳ ನಡುವೆಯೂ ಪೈಪೋಟಿ ನಡೆಸಲು ಮುಂದಾಗಿದೆ.

ಈ ಹಿಂದೆ ಫೇಸ್ ಬುಕ್ ಅಕೌಂಟ್ ಇದ್ದವರು ಮಾತ್ರ ಫೇಸ್ ಬುಕ್ ಮೆಸೆಂಜರ್ ಅಂದರೆ ಫೇಸ್ ಬುಕ್ ಚಾಟಿಂಗ್ ಆ್ಯಪ್ ಬಳಸಬಹುದಿತ್ತು. ಹೀಗಾಗಿ ಫೇಸ್ ಬುಕ್ ಅಕೌಂಟ್ ಇಲ್ಲದವರು ಫೇಸ್ ಬುಕ್ ಚಾಟಿಂಗ್ ಆ್ಯಪ್ ಬಳಸದಿರುವಂತಾಗುತ್ತಿತ್ತು. ಇದರಂತೆ ಸಾಕಷ್ಟು ಮಂದಿ ಇತರೆ ಮೆಸೆಂಜರ್ ಆ್ಯಪ್ ಗಳ ಮೊರೆ ಹೋಗುತ್ತಿದ್ದರು. ಇದೀಗ ಇಂತಹ ಬಳಕೆದಾರರನ್ನು ಸೆಳೆಯಲು ಮುಂದಾಗಿರುವ ಫೇಸ್ ಬುಕ್ ಸಂಸ್ಥೆ ಫೇಸ್ ಬುಕ್ ಅಕೌಂಟ್ ಇಲ್ಲದೆಯೂ ಮೆಸೆಂಜರ್ ಆ್ಯಪ್ ಬಳಕೆ ಮಾಡುವ ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸಲು ಮುಂದಾಗಿದೆ.

ಲಾಗಿನ್ ಆಗುವುದು ಹೇಗೆ...



ನಿಮ್ಮಲ್ಲಿ ಆ್ಯಂಡ್ರಾಯ್ಡ್ ಮೊಬೈಲ್ ಇದ್ದರೆ ಪ್ಲೇ ಸ್ಟೋರ್ ಗೆ ಹೋಗಿ ಫೇಸ್ ಬುಕ್ ಮೆಸೆಂಜರ್ ನ್ನು ಡೌನ್ ಲೋಡ್ ಮಾಡಿ. ನಂತರ ಅದನ್ನು ಓಪನ್ ಮಾಡಿದರೆ. ಮೊದಲು ಲಾಗ್ ಇನ್ ಫೇಸ್ ಬುಕ್ ಎಂಬ ಆಯ್ಕೆ ಇರುತ್ತದೆ. ಇದರ ಕೆಳಗೆ ನಾಟ್ ಆನ್ ಫೇಸ್ ಬುಕ್ ಎಂಬ ಆಯ್ಕೆಯೂ ಇರುತ್ತದೆ. ಫೇಸ್ ಬುಕ್ ಅಕೌಂಟ್ ಇಲ್ಲದವರು ನಾಟ್ ಆನ್ ಫೇಸ್ ಬುಕ್ ಆಯ್ಕೆಗೆ ಹೋದರೆ ಅಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಫೋಟೋ ಹಾಕಿದರೆ ನೀವು ಫೇಸ್ ಬುಕ್ ಮೆಸೆಂಜರ್ ಬಳಕೆ ಮಾಡಬಹುದು.

ಪ್ರಸ್ತುತ ಈ ಸೌಲಭ್ಯವನ್ನು ಸಂಸ್ಥೆಯು ಅಮೆರಿಕ, ಕೆನಡಾ, ಪೆರು ಮತ್ತು ವೆನೆಜುವೆಲಾ ದೇಶದ ಫೇಸ್ ಬುಕ್ ಬಳಕೆದಾರರಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಇತರೆ ದೇಶಗಳಿಗೂ ಈ ಸೌಲಭ್ಯವನ್ನು ಒದಗಿಸುವುದಾಗಿ ಫೇಸ್ ಬುಕ್ ಸಂಸ್ಥೆ ಹೇಳಿದೆ. ಸುಮಾರು 600 ಮಿಲಿಯನ್ ಗೂ ಹೆಚ್ಚು ಬಳಕೆದಾರರು ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಫೇಸ್ ಬುಕ್ ಮೆಸೆಂಜರ್ ಸಹ ಇತರೆ ಚಾಟಿಂಗ್ ಆ್ಯಪ್ ಗಳಂತೆಯೇ ವೀಡಿಯೋ ಕಾಲಿಂಗ್. ವಾಯ್ಸ್ ಮೆಸೇಜ್, ಗ್ರೂಪ್ ಚಾಟ್, ವಿಡೀಯೋ, ಫೋಟೋ ಕಳುಹಿಸುವ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಬಳಕೆದಾರರಿಗೆ ಫೇಸ್ ಬುಕ್ ಸಂಸ್ಥೆ ನೀಡಿದೆ.

SCROLL FOR NEXT