ಉಗ್ರರ ಸಂದೇಶ 
ವಿಜ್ಞಾನ-ತಂತ್ರಜ್ಞಾನ

ಇಬೇ, ರೆಡ್ಡಿಟ್ ಮೂಲಕ ಉಗ್ರರ ಗುಪ್ತ ಸಂದೇಶ ರವಾನೆ?

ತಮ್ಮ ಸಂಘಟನೆಯ ಕಾರ್ಯಕರ್ತರಿಗೆ ಸಂದೇಶಗಳನ್ನು ರವಾನೆ ಮಾಡಲು ಇಸ್ಲಾಮಿಕ್ ಸ್ಟೇಚ್ (ಇಸಿಸ್), ಅಲ್ ಖೈದಾ ಮೊದಲಾದ...

ಕೈರೋ: ತಮ್ಮ ಸಂಘಟನೆಯ ಕಾರ್ಯಕರ್ತರಿಗೆ ಸಂದೇಶಗಳನ್ನು ರವಾನೆ ಮಾಡಲು ಇಸ್ಲಾಮಿಕ್ ಸ್ಟೇಚ್ (ಇಸಿಸ್), ಅಲ್ ಖೈದಾ ಮೊದಲಾದ ಉಗ್ರ ಸಂಘಟನೆಗಳು ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುತ್ತಿವೆ. ಸಾಮಾಜಿಕ ತಾಣಗಳಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಬಿಡುವ ಮೂಲಕವೂ ಇವು ಗುಪ್ತ ಸಂದೇಶಗಳನ್ನು ರವಾನೆ ಮಾಡುತ್ತಿವೆ ಎಂದು ಇಸ್ರೇಲ್‌ನ ಗುಪ್ತಚರ ಇಲಾಖೆ ಮೊಸಾದ್ ಬಿಡುಗಡೆ ಮಾಡಿದ Gideon’s Spies: The Secret History of the Mossad ಎಂಬ ಪುಸ್ತಕದಲ್ಲಿ ಗೋರ್ಡನ್ ಥೋಮಸ್ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

ಅದೇ ವೇಳೆ ಉಗ್ರರ ಮುಂದಿನ ಗುರಿ ಏನೆಂಬುದರ ಬಗ್ಗೆ ಈ ಚಿತ್ರಗಳಲ್ಲಿ ಗುಪ್ತ ಸಂದೇಶಗಳ ಮೂಲಕ ಹೇಳಲಾಗಿದೆ ಎಂದು ಗೋರ್ಡನ್ ಥೋಮಸ್ ಹೇಳಿದ್ದಾರೆ. ಆನ್‌ಲೈನ್ ವ್ಯಾಪಾರ ಸಂಸ್ಥೆಯಾದ ಇಬೇ ಮೂಲಕವೂ ಉಗ್ರರು ಸಂದೇಶ ರವಾನೆ ಮಾಡಿದ್ದಾರೆ ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಸೋಷ್ಯಲ್ ನೆಟ್ವರ್ಕಿಂಗ್ ಸೈಟ್ ಆದ ರೆಡ್ಡಿಟ್‌ನಲ್ಲಿಯೂ ಇಂಥಾ ಕೃತ್ಯಗಳು ನಡೆಯುತ್ತಿರುವುದು ಗಮನಕ್ಕೆ ಬಂದಾಗ ಇದನ್ನು ಪತ್ತೆಹಚ್ಚಲು ಮೆಸೂದ್ ಗುಪ್ತಚರರನ್ನು ನಿಯೋಜಿಸಿತ್ತು. ವಿಡಿಯೋ, ಚಿತ್ರ ಅಥವಾ ಇನ್ಯಾವುದೋ ಸಂದೇಶಗಳ ಮೂಲಕ ಸಂದೇಶಗಳನ್ನು ರವಾನಿಸಲು ಅಲ್‌ಖೈದ್ ಯತ್ನಿಸುತ್ತಿದೆ ಎಂದು ಈ ಹಿಂದೆಯೇ ಸಂಶಯ ಹುಟ್ಟಿಕೊಂಡಿತ್ತು.

ಏತನ್ಮಧ್ಯೆ, ಇಸಿಸ್ ಮತ್ತು ಅಲ್‌ಖೈದಾ ಸಂಘಟನೆಗಳು ಜಿಹಾದಿಗಳಿಗಾಗಿ ಈ ರೀತಿ ಸಂದೇಶ ರವಾನೆ ಮಾಡುತ್ತಿರುವುದನ್ನು ತಡೆಯಲು ಸೈಬರ್ ಅಪರಾಧ ನಿಗ್ರಹ ದಳ ಎಚ್ಚರಿಕೆ ವಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NALSAR ವಿದ್ಯಾರ್ಥಿಗಳ ನಿಷೇಧ ಆದೇಶಕ್ಕೆ BCI ಅಧ್ಯಕ್ಷರ ಕ್ಷಮೆ!

ಪಾಕಿಸ್ತಾನ ಶೇ.4 ರಷ್ಟು ಹಿಂದೂಗಳನ್ನು ಸಹಿಸಿಕೊಳ್ತಿದೆ: ಪಾಕ್ ಅಧ್ಯಕ್ಷ 10% Zardari ಉದ್ಧಟತನದ ಹೇಳಿಕೆ

ಹಳದಿ ರೇಷ್ಮೆ ಧೋತಿ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್ ಕೋಡ್

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ; ವಿಧಾನಸಭೆಯಲ್ಲಿ ಹುಡುಕಬೇಡಿ; CM Vijay ಬಗ್ಗೆ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಗುರಿ!

‘ರಜಾಕರ್‌ಗಳಿಂದ ನಮ್ಮನ್ನು ರಕ್ಷಿಸಿದ್ದು RSS ಅಲ್ಲ, ಭಾರತೀಯ ಸೇನೆ’: BL ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!