ವಿಜ್ಞಾನ-ತಂತ್ರಜ್ಞಾನ

ಗುರುವಿನ ಉಪಗ್ರಹದಲ್ಲಿ ಸಾಗರ ಪತ್ತೆ

Mainashree

ವಾಷಿಂಗ್ಟನ್‌: ಗುರುವಿನ ಅತಿದೊಡ್ಡ ಉಪಗ್ರಹ ವಾದ (ಚಂದ್ರ) ಗ್ಯಾನಿಮೀಡ್‌ನಲ್ಲಿ ಬೃಹತ್‌ ಸಾಗರ ಗುಪ್ತಗಾಮಿನಿ ಯಾಗಿರುವುದು ಪತ್ತೆಯಾಗಿದೆ.

ನಾಸಾದ ‘ಹಬಲ್‌’ ಬಾಹ್ಯಾಂತರಿಕ್ಷ ಟೆಲಿಸ್ಕೋಪ್‌ ಗುರುವಿನ ಉಪಗ್ರಹವಾದ ಗ್ಯಾನಿಮೀಡ್ ನಲ್ಲಿ ಬೃಹತ್ ಸಾಗರವಿರುವುದನ್ನು ಪತ್ತೆ ಹಚ್ಚಿದೆ.

ಸೌರ ವ್ಯೂಹದಲ್ಲೇ ಅತ್ಯಂತ ದೊಡ್ಡ ಉಪಗ್ರಹ ಹಾಗೂ ಮಂಜುಗಡ್ಡೆಯಿಂದ ಆವೃತವಾದ ಗ್ಯಾನಿಮೀಡ್‌ನ ತಳಭಾಗದಲ್ಲಿ ಆಗಾಧವಾದ ಉಪ್ಪು ನೀರಿನ ಸಾಗರ ಇದೆ. ಇಡೀ ಭೂಮಿಯ ಮೇಲಿರುವ ನೀರಿನ ಪ್ರಮಾಣಕ್ಕಿಂತಲೂ ಗ್ಯಾನಿಮೀಡ್‌ನಲ್ಲಿರುವ ಈ ಸಾಗರದ ನೀರಿನ ಪಾಲು ಅಧಿಕ. ಉಪಗ್ರಹದಲ್ಲಿ ಜೀವಸಂಕುಲಕ್ಕೆ ಪೂರಕವಾದ ವಾತಾವರಣ ಇರುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ

SCROLL FOR NEXT