ವೆಬ್‌ಸೈಟ್ ಅಕ್ಷಯ್ ಕುಮಾರ್ ಮತ್ತು ಮಮ್ಮೂಟ್ಟಿ ವಯಸ್ಸು ತೋರಿಸಿದ್ದು ಹೀಗೆ 
ವಿಜ್ಞಾನ-ತಂತ್ರಜ್ಞಾನ

ವಯಸ್ಸು ಎಷ್ಟು ಎಂದರಿಯಲು ಮೈಕ್ರೋಸಾಫ್ಟ್ ವೆಬ್‌ಸೈಟ್

ಇನ್ನೊಬ್ಬರ ವಯಸ್ಸೆಷ್ಟು ಎಂದು ಅರಿಯುವ ಹಂಬಲ ನಿಮಗಿದ್ದರೆ ನಿಮ್ಮ ಸಹಾಯಕ್ಕೆ ಮೈಕ್ರೋಸಾಫ್ಟ್ ಹೊಸ ವೆಬ್‌ಸೈಟ್...

ಹುಡುಗರು ಹೆಣ್ಮಕ್ಕಳಲ್ಲಿ ವಯಸ್ಸು ಎಷ್ಟು ಎಂದು ಕೇಳಿದರೆ, ಹೆಣ್ಮಕ್ಕಳ ವಯಸ್ಸು ಕೇಳುವಂತಿಲ್ಲ ಎಂಬ ಉತ್ತರ ಸಿಗುತ್ತದೆ. ಇನ್ನೊಬ್ಬರ ವಯಸ್ಸೆಷ್ಟು ಎಂದು ಅರಿಯುವ ಹಂಬಲ ನಿಮಗಿದ್ದರೆ ನಿಮ್ಮ ಸಹಾಯಕ್ಕೆ ಮೈಕ್ರೋಸಾಫ್ಟ್ ಹೊಸ ವೆಬ್‌ಸೈಟ್ ಒಂದನ್ನು ಪರಿಚಯಿಸಿದೆ.

ಯಾವುದು ಈ ವೆಬ್‌ಸೈಟ್ ?:
ಮೈಕ್ರೋಸಾಫ್ಟ್‌ ತಯಾರಿಸಿದ ಹೊಸ ವೆಬ್‌ಸೈಟ್‌ನ ಹೆಸರು ಹೌ ಓಲ್ಡ್ ನೆಟ್ (how-old.net)ಇಲ್ಲಿ ನಿಮ್ಮ ಅಥವಾ ನೀವು ವಯಸ್ಸು ಅರಿಯಲು ಇಷ್ಟ ಪಡುವ ವ್ಯಕ್ತಿಯ ಫೋಟೋ ಅಪ್‌ಲೋಡ್ ಮಾಡಿದರೆ ಸಾಕು, ಫೋಟೋದ ಮೇಲೆ ವಯಸ್ಸು ಎಷ್ಟೆಂದು ತೋರಿಸುತ್ತದೆ.

ಇಲ್ಲಿ ತೋರಿಸುವ ವಯಸ್ಸು ನಿಖರವಾಗಿ ಇರಬೇಕೆಂದೇನೂ ಇಲ್ಲ. ಕೆಲವರದ್ದು ಸರಿಯಾದ ವಯಸ್ಸಿಗಿಂತ ಕಡಿಮೆ ತೋರಿಸಿದರೆ, ಇನ್ನು ಕೆಲವರದ್ದು ಜಾಸ್ತಿ ತೋರಿಸುತ್ತದೆ. ಕೆಲವೊಂದು ಫೋಟೋಗಳನ್ನು ಅಪ್‌ಲೋಡ್ ಮಾಡಿದರೆ ಸರಿಯಾದ ವಯಸ್ಸು ತೋರಿಸುತ್ತದೆ. ಹೆಚ್ಚಿನ ಬಳಕೆದಾರರಿಗೆ ಇದು ಸರಿಯಾದ ವಯಸ್ಸು ತೋರಿಸಿದೆಯಂತೆ.

ಒಂದು ವೇಳೆ ವಯಸ್ಸು ಹೆಚ್ಚು -ಕಮ್ಮಿಯಾಗಿ ತೋರಿಸಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಬೇಡ, ಸುಮ್ಮನೆ ನಕ್ಕು ಬಿಡಿ ಎಂದಿದೆ ಮೈಕ್ರೋಸಾಫ್ಟ್

ಹೆಣ್ಣೋ ಗಂಡೋ ಎಂಬುದನ್ನೂ ಗುರುತಿಸುತ್ತದೆ : ಫೋಟೋ ಅಪ್‌ಲೋಡ್ ಮಾಡಿದಾಗ ಮೇಲೆ ವಯಸ್ಸು ತೋರಿಸುವುದರ ಜತೆಗೆ ಫೋಟೋದಲ್ಲಿರುವವರು ಗಂಡೋ ಹೆಣ್ಣೋ ಎಂಬುದನ್ನು  ಚಿತ್ರದ ಮೂಲಕ ತೋರಿಸಲಾಗುತ್ತದೆ.

ಪರಿಷ್ಕರಣೆ ಇನ್ನೂ ಬಾಕಿ ಇದೆ: ನಿಮ್ಮ ವಯಸ್ಸು ಮತ್ತು ಲಿಂಗ ಸರಿಯಾಗಿ ಡಿಸ್‌ಪ್ಲೇ ಆಗದಿರುವುದಕ್ಕೆ ಕ್ಷಮಿಸಿ. ಈ ಫೀಚರ್ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಸಂದೇಶವನ್ನು ಮೈಕ್ರೋಸಾಫ್ಟ್ ನೀಡಿದೆ. ಮಾತ್ರವಲ್ಲ ಈ ಡಿಮೋ ಹಿಂದಿನ ಕಥೆಯನ್ನು ಅಲ್ಲಿ ಕೊಡಲಾಗಿದೆ.

ಇನ್ನು How old are you? ಎಂದು ಕೇಳುವ ಬದಲು How-Old.net# ಗೆ ಫೋಟೋ ಅಪ್‌ಲೋಡ್ ಮಾಡಿ ವಯಸ್ಸು ಎಷ್ಟೆಂದು ತಿಳಿದುಕೊಳ್ಳಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT