ನ್ಯೂಯಾರ್ಕ್ : ಐಫೋನ್‌ನಲ್ಲಿ ಸಂದೇಶ ಸ್ವೀಕರಿಸುವಾಗ ಫೋನ್ ಕ್ರಾಶ್ ಆಗಲು ಕಾರಣವಾಗಿದ್ದ ಬಗ್ ಪತ್ತೆಯಾಗಿದೆ ಎಂದು Apple Inc ಹೇಳಿದೆ.
ಚಿಹ್ನೆ ಹಾಗೂ ಅರೇಬಿಕ್ ಅಕ್ಷರಗಳನ್ನು ಹೊಂದಿರುವ ಈ ಬಗ್ ಬಗ್ಗೆ ಮೊದಲು ಆ್ಯಪಲ್ ನ್ಯೂಸ್ ಬ್ಲಾಗ್ ಮ್ಯಾಕ್ ರೂಮರ್ಸ್‌ನಲ್ಲಿ ಮಂಗಳವಾರ ರಾತ್ರಿ ವರದಿಯಾಗಿತ್ತು.
ಐಮೆಸೇಜ್ ನಲ್ಲಿ ಯುನಿಕೋಡ್ ಅಕ್ಷರಗಳು ಗೋಚರಿಸಿರುವ ಬಗ್ ಬಗ್ಗೆ ನಮಗೆ ತಿಳಿದು ಬಂದಿದೆ. ನಾವು ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ ಬಗ್ ಫಿಕ್ಸ್ ಮಾಡಿಕೊಳ್ಳುತ್ತೇವೆ ಎಂದು ಆ್ಯಪಲ್ ಕಂಪನಿಯ ವಕ್ತಾರ ಹೇಳಿದ್ದರು.
ಇದೀಗ ಯಾವುದೇ ಮೆಸೇಜ್ ಬಂದರೂ ಆ ಮೆಸೇಜ್‌ಗೆ ರಿಪ್ಲೈ ಕಳಿಸುವ ಮೂಲಕ ಈ ಬಗ್‌ನ್ನು ಹೋಗಲಾಡಿಸಬಹುದು ಎಂದು ಮ್ಯಾಕ್‌ರೂಮರ್ಸ್ ಹೇಳಿದೆ.