ಬೆಂಗಳೂರು: ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಸೇರಿದಂತೆ ಇಸ್ರೋದ ಮೂರು ಪ್ರಮುಖ ಕೇಂದ್ರಗಳಲ್ಲಿ ಸೋಮವಾರ ಹೊಸ ನಿರ್ದೇಶಕರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ತಿರುವನಂತಪುರದ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್(ಎಲ್‍ಪಿಎಸ್‍ಸಿ)ನ ನಿರ್ದೇಶಕರಾಗಿರುವ ಖ್ಯಾತ ವಿಜ್ಞಾನಿ ಡಾ.ಕೆ. ಶಿವನ್ ಅವರು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ (ವಿಎಸ್‍ಎಸ್‍ಸಿ) ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇದೇ ವೇಳೆ, ವಿಎಸ್‍ಎಸ್‍ಸಿ ಸಹಾಯಕ ನಿರ್ದೇಶಕರಾಗಿರುವ ಮತ್ತೊಬ್ಬ ವಿಜ್ಞಾನಿ ಎಸ್. ಸೋಮನಾಥ್ ಅವರು ಎಲ್‍ಪಿಎಸ್‍ಸಿ ನಿರ್ದೇಶಕರಾಗಿಯೂ, ವಿಎಸ್‍ಎಸ್‍ಸಿ ಉಪನಿರ್ದೇಶಕರಾಗಿರುವ ಪಿ. ಕುನ್ನಿಕೃಷ್ಣನ್ ಅವರು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿಯೂ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಇಸ್ರೋ ತನ್ನ ಫೇಸ್‍ಬುಕ್ ಪುಟದಲ್ಲಿ ಪ್ರಕಟಿಸಿದೆ.