ವಿಜ್ಞಾನ-ತಂತ್ರಜ್ಞಾನ

ಈ ಜಗತ್ತು ದೇವರ ಸೃಷ್ಟಿ ಅಲ್ಲ

Rashmi Kasaragodu
ಈ ಜಗತ್ತು ದೇವರ ಸೃಷ್ಟಿ. ಅವನ ಶಕ್ತಿ ಅಪಾರ ಎಂದು ಹೇಳುತ್ತೇವೆ. ಜಗತ್ತಿನಾದ್ಯಂತ ನೆಲೆಸಿರುವ ಜನರು ಈ ದೇವರನ್ನು ಹಲವಾರು ಹೆಸರಿನಿಂದ, ಹಲವಾರು ಧರ್ಮಗಳ ಮೂಲಕ, ರೂಪ-ಭಾವಗಳ ಮೂಲಕ ನಂಬುತ್ತಾರೆ, ಪೂಜಿಸುತ್ತಾರೆ. ಆದರೆ ಈ ಜಗತ್ತು ದೇವರ ಸೃಷ್ಟಿ ಅಲ್ಲ. ಜಗತ್ತಿನ ಸೃಷ್ಟಿಗೂ ದೇವರಿಗೂ ಯಾವುದೇ ಸಂಬಂಧವಿಲ್ಲ ಎಂದು ಭೌತಶಾಸ್ತ್ರಜ್ಞರ ವಾದಿಸುತ್ತಿದ್ದಾರೆ.
ದೇವರು, ಅತಿಮಾನುಷ ಶಕ್ತಿಯಿರುವನು. ಅವನೇ ಎಲ್ಲವನ್ನು ನಿಯಂತ್ರಿಸುತ್ತಾನೆ ಎಂದು ನಂಬುವುದಾದರೆ ಆ ನಂಬಿಕೆ ತಪ್ಪು ಎಂದು ಈ ತಜ್ಞರು ಹೇಳುತ್ತಿದ್ದಾರೆ. ಆದರೆ ದೇವರು ಒಬ್ಬ ಗಣಿತ ಪಂಡಿತ ಎಂದು ಹೇಳಿದರೆ ಅದನ್ನು ಒಪ್ಪಬಹುದು ಅಂತಾರೆ ಕೆನಡಾ ವಾಟರ್‌ಲೂ ವಿಶ್ವ ವಿದ್ಯಾಲಯದ ಫಿಸಿಕ್ಸ್  ಆ್ಯಂಡ್ ಆಸ್ಟ್ರೋನಮಿ ವಿಭಾಗದ ಸಂಶೋಧಕರು ಹೇಳಿದ್ದಾರೆ. ಯಾಕೆಂದರೆ ಜಗತ್ತಿನ ಸೃಷ್ಟಿ ಮತ್ತು ವಿಸ್ಮಯವನ್ನು ಗಣಿತ ಮತ್ತು ಭೌತಶಾಸ್ತ್ರದಿಂದ ಮಾತ್ರ ಬಿಡಿಸಲು ಸಾಧ್ಯ ಎಂದು ಸಂಶೋಧಕರು ಹೇಳುತ್ತಾರೆ. 
ಜಗತ್ತಿನ ಸೃಷ್ಟಿ ಹೇಗೆ?
ಈ ಜಗತ್ತು ಪುಟ್ಟ ಪುಟ್ಟ ಕಣಗಳಿಂದ ನಿರ್ಮಿತವಾಗಿದೆ. ಕೆಲವೊಂದು ಎಷ್ಟು ಪುಟ್ಟ ಕಣಗಳು ಎಂದರೆ ಅವು ಇದೆಯೋ ಇಲ್ಲವೋ ಎಂಬುದು ಕೂಡಾ ಗೊತ್ತಾಗುವುದಿಲ್ಲ. ವಿರ್ಚ್ಯುವಲ್ ಪಾರ್ಟಿಕಲ್ಸ್ ಎಂದು ಕರೆಯಲ್ಪಡುವ ಇವುಗಳಲ್ಲಿ ಉಷ್ಣತೆ ಹಾಗೂ ಪ್ರಖರತೆಯಿದೆ. ಇವುಗಳ ಸಂಗಮದಿಂದಲೇ ಜಗತ್ತು ಸೃಷ್ಟಿಯಾಗಿದೆ. ಕ್ವಾಟಂ ಸಿದ್ಧಾಂತವೂ ಇದನ್ನೇ ಹೇಳುತ್ತದೆ.
ಜಗತ್ತಿನ ಸೃಷ್ಟಿಗೆ ಕಾರಣವಾದ ವಿರ್ಚ್ಯುವಲ್ ಪಾರ್ಟಿಕಲ್ ಗಳು ಯಾವುದು ಎಂಬುದರ ಬಗ್ಗೆ ಸಂಶೋಧನೆಗಳು ನಡೆದಿವೆ. ಭೌತಶಾಸ್ತ್ರದ ಇನ್‌ಫ್ಲೇಷನ್ ಥಿಯರಿ ಜತೆ  ಹೊಸ ಎರಡು ಸಿದ್ಧಾಂತಗಳನ್ನು ಸೇರಿಸಿ ಈ ಸಂಶೋಧನೆ ನಡೆಸಲಾಗಿದೆ.  ಮಿನಿಮಮ್ ಲೆಂತ್ ಸ್ಕೇಲ್ ,  ಡಬಲೀ ಸ್ಪೆಷಲ್ ರಿಲೇಟಿವಿಟಿ- ಈ ಎರಡು ಸಿದ್ದಾಂತಗಳಶ ಸಹಾಯದಿಂದ ಸಂಶೋಧನೆ ನಡೆಸಲಾಗಿದೆ.
ಇನ್‌ಫ್ಲೇಷನ್ ಥಿಯರಿ ಪ್ರಕಾರ ವಿರ್ಚ್ಯುವಲ್ ಪಾರ್ಟಿಕಲ್ಸ್ ಗಳ ಉಷ್ಣತೆ ಮತ್ತು ಆಯಸ್ಸು ಕೊನೆಯೇ ಇಲ್ಲದಂತೆ ಹೆಚ್ಚಾಗುತ್ತಾ ಹೋಗುತ್ತದೆ. ಆ ಕಾರಣದಿಂದಲೇ 13.8 ಬಿಲಿಯನ್ ವರ್ಷಗಳ ಹಿಂದೆ ಜಗತ್ತು ಸೃಷ್ಟಿಯಾಗಿದೆ. ಶೂನ್ಯದಿಂದ ಪ್ರಪಂಚದ ಸೃಷ್ಟಿಯಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹಾಗೆ ಯೋಚಿಸುವುದು ಸಲ್ಲ ಅಂತಾರೆ ಫ್ರೊ,.ಮೀರ್.  ವಿರ್ಚ್ಯುವಲ್ ಪಾರ್ಟಿಕಲ್ಸ್ ಗಳು ವಿಕಸಿತಗೊಳ್ಳುವಾಗ  ಜಗತ್ತಿನ ನೆಗಿಟಿವ್ ಗ್ರಾವಿಟೇಷನಲ್ ಎನರ್ಜಿ ಮತ್ತು ಪಾಸಿಟಿವ್ ಮ್ಯಾಟರ್ ಎನರ್ಜಿ ಸೇರಿದಾಗ ಅವೆರಡೂ ಸಮ ಸಮವಾಗಿ ನಿಲ್ಲುತ್ತವೆ. ಅಲ್ಲಿ ಉತ್ಪತ್ತಿಯಾಗುವ ಉಷ್ಣತೆಯೂ ಶೂನ್ಯವಾಗಿದೆ. ಅದು ಹಾಗೆಯೇ ಇದೆ. 
ಯಾವುದೂ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ, ಜಗತ್ತು ಈಗಲೂ ಶೂನ್ಯ ಅವಸ್ಥೆಯಲ್ಲೇ ಇದೆ. ಆದರೆ ಹಿಂದಿಗಿಂತಲೂ ಜಗತ್ತು ಚೆನ್ನಾಗಿ ಕ್ರಮೀಕರಿಸಲ್ಪಟ್ಟಿದೆ ಎಂದು ಪ್ರೊ.ಮೀರ್ ಅಭಿಪ್ರಾಯ ಪಡುತ್ತಾರೆ.
SCROLL FOR NEXT