ಲ್ಯೂಮಿನಿಸೆಂಟ್ ಸೋಲಾರ್ ಕಾನ್ಸಂಟ್ರೇಟರ್ (ಟಿಎಲ್ ಎಸ್‍ಸಿ) ಸೋಲಾರ್ ಸೆಲ್ (ಚಿತ್ರಕೃಪೆ: ಎಕ್ಸ್ ಟ್ರೀಮ್ ಟೆಕ್) 
ವಿಜ್ಞಾನ-ತಂತ್ರಜ್ಞಾನ

ಮನೆಗಳಿಗೂ ಬರಲಿವೆ ಪವರ್ ವಿಂಡೋಸ್ !

ಸೌರ ವಿದ್ಯುತ್ ಕೋಶ ತಯಾರಿಕಾ ಕ್ಷೇತ್ರಗಳಲ್ಲಿ ಹೊಸ ಕ್ರಾಂತಿ ಎನ್ನಬಹುದಾದ, ಲ್ಯೂಮಿನಿಸೆಂಟ್ ಸೋಲಾರ್ ಕಾನ್ಸಂಟ್ರೇಟರ್ (ಟಿಎಲ್ ಎಸ್‍ಸಿ) ಎಂಬ ಹೆಸರಿನ ಹೊಸ ಸೋಲಾರ್ ಸೆಲ್..

ಸೌರ ವಿದ್ಯುತ್ ಕೋಶ ತಯಾರಿಕಾ ಕ್ಷೇತ್ರಗಳಲ್ಲಿ ಹೊಸ ಕ್ರಾಂತಿ ಎನ್ನಬಹುದಾದ, ಲ್ಯೂಮಿನಿಸೆಂಟ್ ಸೋಲಾರ್ ಕಾನ್ಸಂಟ್ರೇಟರ್ (ಟಿಎಲ್ ಎಸ್‍ಸಿ) ಎಂಬ ಹೆಸರಿನ ಹೊಸ ಸೋಲಾರ್ ಸೆಲ್ ಗಳನ್ನು ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧನಾ ತಂಡವೊಂದು ತಯಾರಿಸಿದೆ.

ಈವರೆಗಿನ ಸೋಲಾರ್ ಸೆಲ್ ಗಳಿಗಿಂತ ವಿಭಿನ್ನವಾಗಿರುವ ಇವು ಪಾರದರ್ಶಕವಾಗಿವೆ. ಅಲ್ಲದೆ ಹೆಚ್ಚು ಸಂವೇದನಾಶೀಲವಾಗಿವೆ ಎನ್ನಲಾಗಿದೆ. ಅಂಗೈಯ್ಯಗಲದಷ್ಟು ವಿನ್ಯಾಸದಲ್ಲಿ ತಯಾರಿಸಲಾಗಿರುವ ಈ ಸೆಲ್ ಗಳನ್ನು ನಮ್ಮ ಮನೆಗಳ ಕಿಟಕಿಗಳಿಗೆ ಅಳವಡಿಸಿದರೆ, ಪ್ರತಿಯೊಂದು ಕಿಟಕಿಯೂ ನಮ್ಮ ಮನೆಗೆ ಬೇಕಾದಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತವಂತೆ!

ಟ್ರಾನ್ಸ್ ಪರೆಂಟ್ ಹೇಗೆ ?
ಈ ಸೋಲಾರ್ ಸೆಲ್ ಗಳು ಪಾರದರ್ಶಕವಿರುತ್ತವಾದರೂ, ಇವುಗಳಲ್ಲಿ ಸೂಕ್ಷ್ಮವಾದ ಫೋಟೋ ವೋಲ್ಟಾಯಿಕ್ ಸೆಲ್ ಗಳನ್ನು ಅಳವಡಿಸಲಾಗಿದೆ. ಇವೂ ಪಾರದರ್ಶಕವಾಗಿವೆ. ಆದರೆ, ಇವುಗಳಲ್ಲಿನ ಸಕ್ರ್ಯೂಟ್ ಡಿಸೈನ್ ಪಾರದರ್ಶಕವಾಗಿಲ್ಲ. ಅವು ಮೈಕ್ರೋಸ್ಕೋಪಿಕ್ ಆಗಿರುವುದರಿಂದ ಅವು ಮನುಷ್ಯನ ಬರಿಗಣ್ಣುಗಳಿಗೆ ಕಾಣಸಿಗವು. ಹಾಗಾಗಿಯೇ, ಅಂಗೈಯಷ್ಟಗಲದ ಈ  ಸೋಲಾರ್ ಸೆಲ್ ಗಳನ್ನು ಕಣ್ಣಿಗೆ ಹತ್ತಿರವಾಗಿ ಹಿಡಿದುಕೊಂಡರು ಅದು ಕೇವಲ ಸ್ಪಚ್ಛವಾದ ಗಾಜಿನ ತುಂಡಿನಂತೆ ಕಾಣುತ್ತವೆ. ಹಾಗಾಗಿ, ಇವುಗಳನ್ನು ಮನೆಯ ಕಿಟಕಿಗಳಿಗೆ ಸಾಮಾನ್ಯವಾಗಿ  ಉಪಯೋಗಿಸುವ ಗಾಜಿನ ಬದಲಿಗೆ ಉಪಯೋಗಿಸಬಹುದು.

ಆಗ, ನಿಮ್ಮ ಮನೆಯ ಪ್ರತಿಯೊಂದು ಕಿಟಕಿಯೂ ಪವರ್ ವಿಂಡೋ ಆಗುವುದರಲ್ಲಿ ಸಂಶಯವಿಲ್ಲ. ಕಾರ್ಯವಿಧಾನ ಟಿಎಸ್‍ಎಲ್ ಸಿಗಳೊಳಗೆ ಸೂಕ್ಷ್ಮವಾದ ಇನ್ಫ್ರಾ ರೆಡ್ ಕಿರಣಗಳು  ಹೊಮ್ಮುವಂತೆ ಇವುಗಳನ್ನು ರಚಿಸಲಾಗಿದೆ. ಇವು ಸೂರ್ಯನಿಂದ ಅಥವಾ ಎಲೆಕ್ಟ್ರಿಕ್ ಬಲ್ಬ್‍ಗಳ ಮಂದ ಬೆಳಕನ್ನೂ ಹೀರಿಕೊಂಡು ವಿದ್ಯುತ್ ತರಂಗಗಳನ್ನಾಗಿ ಪರಿವರ್ತಿಸುತ್ತವೆ. ಸದ್ಯಕ್ಕೆ  ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಸೋಲಾರ್ ಸೆಲ್‍ಗಳಲ್ಲಿ ಬೆಳಕಿನ ಕಿರಣಗಳನ್ನು ಹೀರುವ, ಅವರನ್ನು ಸಂಸ್ಕರಿಸಿ ಅವುಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಪ್ರಮುಖ ಕೋಶವನ್ನು ಒಂದೇ  ಫ್ರೇಮ್ ನೊಳಗೆ ಅಳವಡಿಸಿ ಅವುಗಳನ್ನು ಗಾಜಿನ ಪರದೆಯಿಂದ ಮುಚ್ಚಿರಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT