ವಾಷಿಂಗ್ ಟನ್: ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆಯಾಗುವ ಜನಪ್ರಿಯ ಆಪ್ ಗಳ ಪಟ್ಟಿಯಲ್ಲಿ ಫೆಸ್ ಬುಕ್ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು ಮೆಸಂಜರ್ ಎರಡನೇ ಸ್ಥಾನ ಪಡೆದಿದೆ.
ಮೆಸೆಂಜರ್ ಆಪ್ ಗೂ ಮುನ್ನ ಯೂಟ್ಯೂಬ್ ಆಪ್ ಸ್ಮಾರ್ಟ್ ಫೋನ್ ಗಳಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿತ್ತು, ಈಗ ಯೂಟ್ಯೂಬ್ ಸ್ಥಾನವನ್ನು ಫೇಸ್ ಬುಕ್ ನ ಮೆಸೆಂಜರ್ ಆಪ್ ಕಸಿದುಕೊಂಡಿದೆ ಎಂದು ಯುಎಸ್ ನ ಮಾರುಕಟ್ಟೆ ವರದಿ ತಿಳಿಸಿದೆ.
ಫೇಸ್ ಬುಕ್ ಸ್ಮಾರ್ಟ್ ಫೋನ್ ಗಳ ಟಾಪ್ ಆಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶೇ.73 .3 ರಷ್ಟು ಆಪ್ ಬಳಕೆದಾರರು ಫೇಸ್ ಬುಕ್ ಆಪ್ ಡೌನ್ ಲೋಡ್ ಮಾಡಿ ಬಳಸುತ್ತಿದ್ದಾರ್ತೆ, ಇನ್ನು ಫೇಸ್ ಬುಕ್ ಮೆಸೆಂಜರ್ ಆಪ್ ನ್ನು ಶೇ.59 .5 ರಷ್ಟು ಜನರು ಬಳಕೆ ಮಾಡುತ್ತಿದ್ದಾರೆ. ಯೂಟೂಬ್ ಬಳಕೆದಾರರು ಶೇ.59 .3 ಕ್ಕೆ ಕುಸಿದಿದ್ದರೆ, ಗೂಗಲ್ ಸರ್ಚ್ ನ್ನು ಶೇ.52 ರಷ್ಟು ಜನರನ್ನು ತಲುಪಿದೆ ಎಂದು ತಿಳಿದುಬಂದಿದೆ. ಜನಪ್ರಿಯ ಆಪ್ ಗಳ ಪಟ್ಟಿಯಲ್ಲಿ ಟ್ವಿಟರ್ ಟಾಪ್ 13 ರಲ್ಲಿದ್ದರೆ, ವಾಟ್ಸ್ ಆಪ್ ಟಾಪ್ 15 ನೇ ಸ್ಥಾನ ಪಡೆದಿದೆ.