ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ @ ವರ್ಕ್ ಬಿಡುಗಡೆಗೆ ತಯಾರಿ

Srinivas Rao BV

ನ್ಯೂಯಾರ್ಕ್: ಕಚೇರಿಗಳಲ್ಲಿ ಫೇಸ್ ಬುಕ್ ಮಾಡಲು ಸಾಧ್ಯವಾಗದವರಿಗೆ ಶೀಘ್ರವೇ ಫೇಸ್ ಬುಕ್ ಬಳಕೆ ಸೌಲಭ್ಯ ಸಿಗಲಿದೆ. ಇದಕ್ಕಾಗಿಯೇ ಫೇಸ್ ಬುಕ್ ಅಟ್ ವರ್ಕ್ ತಯಾರಾಗಿದ್ದು, ಸಹೋದ್ಯೋಗಿಗಳೊಂದಿಗೆ ಸಂವಹನ  ನಡೆಸಬಹುದಾಗಿದೆ.
ಫೇಸ್ ಬುಕ್ ಅಟ್ ವರ್ಕ್ ಪ್ರಾಯೋಗಿಕ ಹಂತದಲ್ಲಿದ್ದು, ವರ್ಷಾಂತ್ಯದ ವೇಳೆಗೆ ಈ ಸೌಲಭ್ಯ ಕಚೇರಿಗಳಲ್ಲಿ ಲಭ್ಯವಾಗಲಿದೆ ಎಂದು ಯೋಜನೆಯ ಮುಖ್ಯಸ್ಥ ಜೂಲಿಯನ್ ಕೊಡೊರ್ನಿಯು ಹೇಳಿದ್ದಾರೆ. ಪ್ರಾಯೋಗಿಕ ಹಂತದಲ್ಲಿರುವ ಆವೃತ್ತಿಯನ್ನು ಫೇಸ್ ಬುಕ್ ತನ್ನ ಕಚೇರಿಯಲ್ಲಿ ಹಲವು ವರ್ಷಗಳಿಂದ ಬಳಸುತ್ತಿದೆ. ಈಗ ಇತರ ಕಂಪನಿಗಳಿಗೂ ಇದು ಜಾರಿಯಾಗಲಿದೆ.
ಪ್ರಾಯೋಗಿಕ ಹಂತದದಲ್ಲೇ ಫೇಸ್ ಬುಕ್ ಅಟ್ ವರ್ಕ್ ನ್ನು ಸುಮಾರು ನೂರಕ್ಕೂ ಹೆಚ್ಚು ಸಂಸ್ಥೆಗಳು ಬಳಸುತ್ತಿದ್ದು ವಿಸ್ತರಿಸಲು ನಿರ್ಧರಿಸಿವೆ. ಅಮೆರಿಕಾದ ಇ-ಕಾಮರ್ಸ್ ಸಂಸ್ಥೆಯೊಂದು ಫೇಸ್ ಬುಕ್ ಅಟ್ ವರ್ಕ್ ಸೌಲಭ್ಯವನ್ನು 200 ಉದ್ಯೋಗಿಗಳಿಂದ 2 ,000 ಉದ್ಯೋಗಿಗಳವರೆಗೆ ವಿಸ್ತರಿಸಲಿದೆ. ಫೇಸ್ ಬುಕ್ ಬಳಕೆಯಿಂದ ಉತ್ಪಾದಕತೆ ನಷ್ಟ ತಡೆಗಟ್ಟಲು ಫೇಸ್ ಬುಕ್ ಅಟ್ ವರ್ಕ್ ಸೌಲಭ್ಯ ನೀಡಲಾಗುತ್ತಿದೆ.

SCROLL FOR NEXT