ವಿಜ್ಞಾನ-ತಂತ್ರಜ್ಞಾನ

ಅಪಾಯಕಾರಿ ಸಿಗ್ನಲ್: ಉಗ್ರರಿಗೆ ವರದಾನವಾಗಲಿದೆ ಎನ್‌ಕ್ರಿಪ್ಟೆಡ್ ಚಾಟ್

Rashmi Kasaragodu
ಎನ್‌ಕ್ರಿಪ್ಟೆಡ್ ಚಾಟ್ ಆ್ಯಪ್‌ಗಳು ದೇಶದ ಭದ್ರತೆಗೆ ಧಕ್ಕೆಯಾಗಲಿದೆ ಎಂಬ ಸುದ್ದಿಯನ್ನು ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ ಭಾರತದಲ್ಲಿ ಇಸಿಸ್ ಉಗ್ರರು ಮುಖ್ಯವಾಗಿ ಅಮೆರಿಕದ ವಿಷಲ್ ಬ್ಲೋವರ್ ಎಡ್ವರ್ಡ್ ಸ್ನೋಡೆವ್ ಅವರ ವಿಧಾನವನ್ನೇ ಇಲ್ಲಿ ಬಳಸುತ್ತಾರೆ. ಅಂದರೆ ಭಾರತದ ಉಗ್ರರು ಸಿಗ್ನಲ್ ಡೆಸ್ಕ್ ಟಾಪ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ ಎಂಬುದು ವರದಿಯಾಗಿದೆ. ಈ ಆ್ಯಪ್‌ಗಳು ಸಂದೇಶಗಳನ್ನು ಗುಪ್ತವಾಗಿಡಲು ಸಹಾಯ ಮಾಡುತ್ತವೆ. ರಾಷ್ಟ್ರೀಯ ತನಿಖಾ ತಂಡ ನಡೆಸಿದ ತನಿಖೆಯೊಂದರಲ್ಲಿ ಉಗ್ರರು ಇಂಥಾ ಆ್ಯಪ್‌ಗಳನ್ನು ಬಳಸುತ್ತಾರೆ ಎಂಬುದು ಗಮನಕ್ಕೆ ಬಂದಿದೆ. 
ಎನ್‌ಕ್ರಿಪ್ಟೆಡ್ ಸಂದೇಶಗಳನ್ನು ಸರ್ಕಾರಕ್ಕಾಗಲೀ ತನಿಖಾ ಸಂಸ್ಥೆಗಳಿಗಾಗಿ ಭೇದಿಸಲು ಸಾಧ್ಯವಾಗದಿರುವ ಕಾರಣ ಉಗ್ರರಿಗೆ ಇಂಥಾ ಆ್ಯಪ್‌ಗಳು ವರದಾನವಾಗಿವೆ. ಈ ಹಿಂದೆ ಸಿರಿಯಾದಲ್ಲಿ ಇಸಿಸ್ ಉಗ್ರರು ಇಂಥಾ ಆ್ಯಪ್‌ಗಳನ್ನು ಬಳಸುತ್ತಿರುವ ವಿಷಯ ಬೆಳಕಿಗೆ ಬಂದಿತ್ತು.  ಟೆಲಿಗ್ರಾಂ, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಪ್ ಮೊದಲಾದ ಆ್ಯಪ್‌ಗಳನ್ನು ಉಗ್ರರು ಬಳಸುತ್ತಿದ್ದಾರೆ. 
ಸಿಗ್ನಲ್‌ಗೆ ಸಮಾನವಾಗಿ ಕಾರ್ಯವೆಸಗುವ ರಹಸ್ಯ ಸಂಪರ್ಕ ಆ್ಯಪ್‌ವೊಂದನ್ನು ತಯಾರಿಸಲು ಇಸಿಸ್ ಅಬು ಅನಸ್ ಎಂಬಾತನಿಗೆ ಹೇಳಿದೆ ಎಂಬ ವಿಷಯವನ್ನೂ ಗುಪ್ತಚರ ತಂಡ ಹೇಳಿದೆ. ಇಸಿಸ್ ಸದಸ್ಯರು ಎನ್‌ಕ್ರಿಪ್ಟೆಡ್ ಚಾಟ್ ಪ್ರೋಗ್ರಾಂ ಆಗಿರುವ ಟೆಲಿಗ್ರಾಂನ್ನೂ ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ ಬುಕ್,ವಾಟ್ಸಪ್, ಇನ್‌ಸ್ಟಾಗ್ರಾಂ ಮೊದಲಾದ ಚಾಟ್ ಅಪ್ಲಿಕೇಷನ್‌ಗಳನ್ನು ಗುಪ್ತಚರ ಸಂಸ್ಥೆಗಳು ನಿಗಾ ಇರಿಸುತ್ತವೆ. ಆದರೆ ಸಿಗ್ನಲ್ ಆ್ಯಪ್ ಸಂಪರ್ಕದಿಂದ ಕಾರ್ಯವೆಸಗುವುದಾದರೆ ಅಲ್ಲಿನ ಸಂದೇಶಗಳನ್ನು ಪತ್ತೆ ಹಚ್ಚುವುದು ಕಷ್ಟ ಎಂದು ತಜ್ಞರು ಹೇಳಿದ್ದಾರೆ.
ಏತನ್ಮಧ್ಯೆ, ಸಿಗ್ನಲ್ ಡೆಸ್ಕ್ ಟಾಪ್ ಎಲ್ಲರಿಗೂ ಲಭ್ಯವಾಗಿರುವುದರಿಂದ ಭಯೋತ್ಪಾದನಾ ಕೃತ್ಯಗಳಿಗೆ ಇದು ಸಹಾಯವಾಗುವ ಮೂಲಕ ಆತಂಕ ಸೃಷ್ಟಿಸಿದೆ.
SCROLL FOR NEXT