ಈಗೀಗ ಹಿರಿಯ ನಾಗರಿಕರಿಗೂ ಫೇಸ್ ಬುಕ್ ಅಂದ್ರೆ ಇಷ್ಚ 
ವಿಜ್ಞಾನ-ತಂತ್ರಜ್ಞಾನ

ಈಗೀಗ ಹಿರಿಯ ನಾಗರಿಕರಿಗೂ ಫೇಸ್ ಬುಕ್ ಅಂದ್ರೆ ಇಷ್ಚ

2004 ರಲ್ಲಿ ಪ್ರಾರಂಭವಾದ ಸಾಮಾಜಿಕ ಜಾಲತಾಣ ಫೇಸ್ ಬುಕ್, ಈ ವರೆಗೂ ಯುವಜನರನ್ನು ಮಾತ್ರ ಸೆಳೆಯುತ್ತಿತ್ತು.

ವಾಷಿಂಗ್ ಟನ್: 2004 ರಲ್ಲಿ ಪ್ರಾರಂಭವಾದ ಸಾಮಾಜಿಕ ಜಾಲತಾಣ ಫೇಸ್ ಬುಕ್, ಈ ವರೆಗೂ ಯುವಜನರನ್ನು ಮಾತ್ರ ಸೆಳೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಗೆ ಹಿರಿಯ ನಾಗರಿಕರು ಸೇರ್ಪಡೆಯಾಗುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಹಿರಿಯ ನಾಗರಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಫೇಸ್ ಬುಕ್ ಗೆ ಲಾಗ್ ಇನ್ ಆಗುತ್ತಿದ್ದು ಮುಂಚೂಣಿಯಲ್ಲಿರುವ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ನಾಗರಿಕ ಸಂಖ್ಯೆ ಏರಿಕೆಯಾಗುತ್ತಿದೆ. ಈ ಬಗ್ಗೆ ಪೆನ್ ಸ್ಟೇಟ್ ಸಂಶೋಧಕರು ಸಮೀಕ್ಷೆ ನಡೆಸಿದ್ದಾರೆ. ಸಂಶೋಧಕ ಎನ್ ಹ್ವಾ ಜಂಗ್ ಪ್ರಕಾರ ಹಿರಿಯ ನಾಗರಿಕರು ತಮ್ಮ ಹಳೆಯ ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಫೇಸ್ ಬುಕ್ ನ್ನು ಬಳಸುತ್ತಿದ್ದಾರಾಂತೆ.
ಹಿರಿಯ ನಾಗರಿಕರು ದಿನವೊಂದಕ್ಕೆ 2 .46 ಬಾರಿ ಫೇಸ್ ಬುಕ್ ಗೆ ಭೇಟಿ ನೀಡಿ ದಿನವೊಂದಕ್ಕೆ ಕನಿಷ್ಠ 35 ನಿಮಿಷಕ್ಕೂ ಹೆಚ್ಚು ಸಮಯ ಫೇಸ್ ಬುಕ್ ನಲ್ಲಿ ಕಳೆಯಲಿದ್ದಾರೆ ಎಂದು ಸಮೀಕ್ಷೆಯ ಮಾದರಿ ಸಂಗ್ರಹಗಳ ಮೂಲಕ ತಿಳಿದುಬಂದಿದೆ. ಮತ್ತೋಂದು ವಿಷೇಶ ವಿಷಯವೆಂದರೆ  ಸಾಮಾಜಿಕ ಸಂಬಂಧಗಳಿಂದ ಹೆಚ್ಚು ಪ್ರೇರಣೆ ಪಡೆಯುವವ ಪ್ರವೃತ್ತಿ ಹೊಂದಿರುವ ಹಿರಿಯರು, ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲದಿಂದ ಫೇಸ್ ಬುಕ್ ಬಳಸುತ್ತಾರೆ ಎಂದು ಸಂಶೋಧಕ ಎಸ್  ಶಾಮ್ ಸುಂದರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!