ಅತಿಬುದ್ಧಿವಂತನೆಂದು ಹೇಳಿ ಮಾನಸಿಕ ಅಸ್ವಸ್ಥನ ವೀರ್ಯ ದಾನ ಮಾಡಿದ್ದ ಸಂಸ್ಥೆ ವಿರುದ್ಧ ದೂರು! 
ವಿಜ್ಞಾನ-ತಂತ್ರಜ್ಞಾನ

ಅತಿಬುದ್ಧಿವಂತನೆಂದು ಹೇಳಿ ಮಾನಸಿಕ ಅಸ್ವಸ್ಥನ ವೀರ್ಯ ದಾನ ಮಾಡಿದ್ದ ಸಂಸ್ಥೆ ವಿರುದ್ಧ ದೂರು!

ಅನೇಕ ರೀತಿಯ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದ ವ್ಯಕ್ತಿಯನ್ನು ಅತಿ ಬುದ್ಧಿವಂತನೆಂದು ಹೇಳಿ ಆತನ ವೀರ್ಯವನ್ನು ದಾನ ಮಾಡಿದ್ದ ಸಂಸ್ಥೆ ವಿರುದ್ಧ ಕೆನಡಾದ ಮೂರು ಕುಟುಂಬಗಳು ಪ್ರಕರಣ ದಾಖಲಿಸಿವೆ.

ಒಟ್ಟಾವಾ: ಅನೇಕ ರೀತಿಯ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದ ವ್ಯಕ್ತಿಯನ್ನು ಅತಿ ಬುದ್ಧಿವಂತನೆಂದು ಹೇಳಿ ಆತನ ವೀರ್ಯವನ್ನು ದಾನ ಮಾಡಿದ್ದ ಸಂಸ್ಥೆ ವಿರುದ್ಧ ಕೆನಡಾದ ಮೂರು ಕುಟುಂಬಗಳು ಪ್ರಕರಣ ದಾಖಲಿಸಿವೆ.
ಕೆನಡಾದ ವೀರ್ಯ ಬ್ಯಾಂಕ್ ಮಾನಸಿಕ ಅಸ್ವಸ್ಥತೆ ಹೊರತಾಗಿಯೂ ಆ ವ್ಯಕ್ತಿಯಿಂದ ವೀರ್ಯವನ್ನು ಪಡೆದಿದ್ದ ಪರಿಣಾಮ ಕಳೆದ ಒಂದು ದಶಕದಲ್ಲಿ ಬ್ರಿಟನ್, ಕೆನಡಾ, ಯುಎಸ್ ನ 36 ಕ್ಕೂ ಹೆಚ್ಚು ಮಹಿಳೆಯರು ಮಾನಸಿಕ ಅಸ್ವಸ್ಥತೆ ಹೊಂದಿದ್ದ ವ್ಯಕ್ತಿಯ ವೀರ್ಯದಿಂದ ಗರ್ಭಧರಿಸಿದ್ದಾರೆ.   
ವೀರ್ಯಬ್ಯಾಂಕ್ ನ ಬೇಜವಾಬ್ದಾರಿತನದ ಬಗ್ಗೆ ಅಕ್ರೋಶಗೊಂಡಿರುವ ಕೆನಡಾ ಕುಟುಂಬಗಳು ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. " ಮಕ್ಕಳಿಲ್ಲದ ದಂಪತಿಗಳು ಇಂತಹ ಸಂಸ್ಥೆಗಳ ಮೇಲೆ ನಂಬಿಕೆ ಇಡುತ್ತಾರೆ. ಆದರೆ ಈ ರೀತಿಯ ಆಘಾತ ಎದುರಾಗುವುದು ಭಯಾನಕ ಎಂದು ಪ್ರಕರಣ ದಾಖಲಿಸಲು ಮುಂದಾಗಿರುವ ಕುಟುಂಬಗಳು ಅಮೆರಿಕ ಮೂಲದ ಕ್ಸೈಟೆಕ್ಸ್ ಕಾರ್ಪೊರೇಶನ್, ಒಂಟಾರಿಯೊದ ಔಟ್ ರೀಚ್ ಆರೋಗ್ಯ ಸೇವೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.  
ವೀರ್ಯ ಬ್ಯಾಂಕ್ ನ ಸಂಸ್ಥೆಗಳಿಂದ ಮೋಸ ಹೋಗಿರುವ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸುತ್ತಿರುವ ಕುಟುಂಬಗಳು ಸಂಸ್ಥೆಯಿಂದ 11 .7 ಮಿಲಿಯನ್ ಡಾಲರ್ ಪರಿಹಾರವನ್ನು ಕೇಳಿದ್ದಾರೆ. ಆದರೆ ವೀರ್ಯ ದಾನ ಮಾಡಿದನವ ಬುದ್ಧಿ ಮತ್ತೆಯನ್ನು ತಿರುಚಿವ ಬಗ್ಗೆ ಕುಟುಂಬದವರು ಮಾಡಿರುವ ಆರೋಪ ಕೋರ್ಟ್ ನಲ್ಲಿ ಇನ್ನಷ್ಟೇ ಸಾಬೀತಾಗಬೇಕಿದೆ. 
ವೀರ್ಯದಾನ ಮಾಡಿದ್ದ 39 ವರ್ಷದ ವ್ಯಕ್ತಿ ನರವಿಜ್ಞಾನಕ್ಕೆ ಸಂಬಂಧಿಸಿದಂತೆ ಪಿಹೆಚ್ ಡಿ ಗಾಗಿ ಕೆಲಸ ಮಾಡುತ್ತಿದ್ದಾನೆ, ಆದರೆ ಸ್ಕಿಜೋಫ್ರೇನಿಯಾ ಎಂಬ ನಾರ್ಕಿಸ್ಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್ ನ್ನು ಎದುರಿಸುತ್ತಿದ್ದಾನೆ ಎಂಬ ಮಾಹಿತಿ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಈ ವ್ಯಕ್ತಿ 20 ವರ್ಷದ ಹಿಂದೆ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ ಎಂದೂ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT