ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ನಲ್ಲಿ ಫೇಕ್ ನ್ಯೂಸ್ ಗೆ ಕಡಿವಾಣ ಹಾಕಲು ಸರ್ವೇ ನೆರವು!

Srinivas Rao BV
ನ್ಯೂಯಾರ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ ಸುದ್ದಿಗಳು ಹೆಚ್ಚು ಪ್ರಕಟವಾಗುತ್ತಿದ್ದು, ಕಡಿವಾಣ ಹಾಕಲು ಫೇಸ್ ಬುಕ್ ಸರ್ವೇ ಮಾರ್ಗವನ್ನು ಕಂಡುಕೊಂಡಿದೆ.
ಜಾಲತಾಣದಲ್ಲಿ ಪ್ರಕಟವಾಗುವ ಲೇಖನ/ ಸುದ್ದಿಗಳ ಬಗ್ಗೆ ಸರ್ವೇ ಮೂಲಕ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವ ಫೇಸ್ ಬುಕ್, ಲೇಖನದಲ್ಲಿ ಎಷ್ಟರ ಮಟ್ಟಿಗೆ ದಾರಿ ತಪ್ಪಿಸುವ ಅಂಶಗಳಿವೆ ಎಂಬುದನ್ನು ತಿಳಿದುಕೊಳ್ಳಲಿದೆ. ಟೆಕ್ ಕ್ರಂಚ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಸರ್ವೇ ಫೇಕ್ ನ್ಯೂಸ್ ಗಳಿಗೆ ಕಡಿವಾಣ ಹಾಕಲು ಫೇಸ್ ಬುಕ್ ಕಂಡುಕೊಂಡಿರುವ ಹೊಸ ಮಾರ್ಗ ಎಂದು ಅಧಿಕೃತವಾಗಿ ತಿಳಿಸಿದೆ. 
ನ್ಯೂಸ್ ಫೀಡ್ ನ ಗುಣಮಟ್ಟವನ್ನು ತಿಳಿದುಕೊಳ್ಳಲು ಫೇಸ್ ಬುಕ್ ಸರ್ವೇಯನ್ನು ಮಾಡಲಿದೆ. ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಫೇಕ್ ಮಾಹಿತಿಗಳನ್ನು ನಿಯಂತ್ರಿಸಲು ಇತರ ಮಾಪನಗಳನ್ನೂ ಸಹ ಫೇಸ್ ಬುಕ್ ಬಳಸಿಕೊಂಡಿದೆ. ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಲೇಖನಗಳ ಕೆಳಗೆ " ಈ ಲೇಖನದ ಶೀರ್ಷಿಕೆಯಲ್ಲಿ ಎಷ್ಟರ ಮಟ್ಟಿಗೆ ದಾರಿ ತಪ್ಪಿಸುವ ಅಂಶಗಳಿವೆ ಎಂದು ಕೇಳಿ ಒಂದೂ ಇಲ್ಲ, ಅಥವಾ ಎಲ್ಲವೂ ಎಂಬ ಆಯ್ಕೆಗಳವರೆಗೆ ಹಲವು ಆಯ್ಕೆಗಳನ್ನು ನೀಡಲಾಗುತ್ತಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಸುಳ್ ಸುದ್ದಿಯೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಫೇಕ್ ನ್ಯೂಸ್ ಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದೆ.  
SCROLL FOR NEXT