ನವದೆಹಲಿ: ಭಾರತೀಯ ಮೊಬೈಲ್ ಮಾರುಕಟ್ಟೆಯ ಶೇ.28.52 ರಷ್ಟನ್ನು ವ್ಯಾಪಿಸಿರುವ ಸ್ಯಾಮ್ ಸಂಗ್ ಸಂಸ್ಥೆ 2016 ರಲ್ಲಿ ಅತಿ ಹೆಚ್ಚು ಮೊಬೈಲ್ ಫೋನ್ ಗಳನ್ನು ಮಾರಾಟಾ ಮಾಡಿದೆ. ನಂತರದ ಸ್ಥಾನದಲ್ಲಿ ಆಪಲ್, ಐಫೋನ್, ಮೋಟರೋಲಾ ಸಂಸ್ಥೆಗಳಿವೆ.
ಐಫೋನ್ ಸಂಸ್ಥೆ ಶೇ.14.87, ಮೋಟರೋಲಾ ಸಂಸ್ಥೆ ಶೇ.10.75 ರಷ್ಟು ಮಾರುಕಟ್ಟೆಯನ್ನು ವ್ಯಾಪಿಸಿದೆ. ಡಿ.10 ರಂದು ಬಿಡುಗಡೆಯಾಗಿರುವ ವರದಿಯ ಪ್ರಕಾರ ಸ್ಯಾಮ್ ಸಂಗ್ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಮಾರಾಟವಾಗಿರುವ ಫೋನ್ ಗಳಾಗಿವೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ ಗ್ರಾಂಡ್ I9082 ಅತ್ಯಂತ ಹೆಚ್ಚು ಮಾರಾಟವಾಗಿರುವ ಫೋನ್ ಗಳಾಗಿದ್ದು ಶೇ.3.02 ರಷ್ಟು ಮಾರಾಟವಾಗಿದೆ ಎಂದು ತಿಳಿದುಬಂದಿದೆ.