ಮೈಸೂರು: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 8 ಸಾವಿರ ಎಕರೆ ಪ್ರದೇಶದಲ್ಲಿ ಭಾರತ ಸರ್ಕಾರ ಅಣು ಸ್ಥಾವರ ನಿರ್ಮಿಸುತ್ತಿದೆ ಎಂದು ಹಿರಿಯ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಮೈಸೂರಿನಲ್ಲಿ ಮುಕ್ತಾಯವಾದ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನಲ್ಲಿ ಭಾಗವಹಿಸಲು ಬಂದಿದ್ದ ಹಿರಿಯ ಅಣು ವಿಜ್ಞಾನಿ ಆರ್.ಕೆ.ಸಿನ್ಹಾ ಈ ಅಂಶವನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಯೋಜನೆ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಪರಿಹರಿಸಲಾ- ಗುತ್ತದೆ ಎಂದು ಆರ್.ಕೆ.ಸಿನ್ಹಾ ಹಾಗೂ ಭಾಭಾ ಅಣು ಶಕ್ತಿ ಕೇಂದ್ರದ ಮತ್ತೊಬ್ಬ ವಿಜ್ಞಾನಿ ತಿಳಿಸಿದ್ದಾರೆ. ``ನಾವು ಯಾರಿಗೂ ಹಾನಿ ಉಂಟು ಮಾಡುವುದಿಲ್ಲ. ಯುರೇ- ನಿಯಂ ಅಭಿವೃದ್ಧಿಯಿಂದ ಪರಿಸರಕ್ಕೆ ಹಾನಿ ಉಂಟಾಗುವುದಿಲ್ಲ. ಸಂಬಂಧಪಟ್ಟವರಿಗೆ ಸರಿಯಾದ ಶುಲ್ಕ ಪಾವತಿ ಮಾಡಿ ಜಮೀನು ಖರೀದಿಸಿದ್ದೇವೆ. ಎಲ್ಲ ರೀತಿಯಿಂದ ರಕ್ಷ- ಣೆಯ ಹೊಣೆಯನ್ನು ಹೊತ್ತುಕೊಳ್ಳುತ್ತೇವೆ. ಎಲ್ಲ ರೀತಿಯಿಂದಲೂ ಜನರು ಸಂತೋಷವಾಗಿ ದ್ದಾರೆ,'' ಎಂದು ಸಿನ್ಹಾ ತಿಳಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲೇ ಅದನ್ನು ನಿರ್ಮಿಸಲಾಗುತ್ತದೆ ಎಂದಿದ್ದಾರೆ ಸಿನ್ಹಾ. ಅವರು ಇತ್ತೀಚೆಗಷ್ಟೇ ಅಣು ಶಕ್ತಿ ಆಯೋಗದ ಅಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು. ನಾವೇಕೆ ಒಪ್ಪಿಕೊಳ್ಳಬಾರದು?: ``ಪರಮಾಣು ಇಂಧನದಲ್ಲಿ ದೇಶ ಸ್ವಾವಲಂಬಿ- ಯಾಗಿಬೇಕು. ಅದುವೇ ನಮ್ಮ ನಿಲುವು ಏಕೆ ಆಗಿರಬಾರದು? ಸದ್ಯ ಇಂಧನ ವಿದೇಶಗಳಿಂದ ದೇಶಕ್ಕೆ ಆಮದಾಗುತ್ತಿದೆ. ಇದೊಂದು ವ್ಯೂಹಾತ್ಮಕ ಯೋಜನೆ. ಅದರ ನಿರ್ಮಾಣದ ಬಗ್ಗೆ ನಾವೇಕೆ ಒಪ್ಪಿಕೊಳ್ಳಬಾರದು'' ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಸಬ್‍ಮೆರಿನ್ ಗಳು ಅದರಿಂದಲೇ ಕೆಲಸ ಮಾಡುತ್ತವೆ. ಹೀಗಾಗಿ ನಾವು ಈ ಕೆಲಸ ನಿಲ್ಲಿಸಬೇಕೇ? ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. ಭಾರತ ಸರ್ಕಾರ ಕೈಗೊಂಡಿರುವ ಯೋಜನೆ ಬಗ್ಗೆ ಇತ್ತೀಚೆಗೆ ಅಮೆರಿಕದ ಫಾರಿನ್ ಪಾಲಿಸಿ' ನಿಯತಕಾಲಿಕ ಈ ಬಗ್ಗೆ ವರದಿ ಮಾಡಿತ್ತು. ಆದರೆ ಈ ಅಂಶವನ್ನು ಕೇಂದ್ರ ವಿದೇಶಾಂಗ ಇಲಾಖೆ ಹಾಗೂ ಅಣು ಶಕ್ತಿ ಆಯೋಗದ ಅಧ್ಯಕ್ಷ ಡಾ.ಶೇಖರ್ ಬಸು ಪ್ರಬಲವಾಗಿ ತಿರಸ್ಕರಿಸಿದ್ದರು.