ವಿಜ್ಞಾನ-ತಂತ್ರಜ್ಞಾನ

ಐಐಟಿ ಗುವಾಹಟಿ ಯಿಂದ ಟೆಕ್ನಾಥ್ಲೊನ್ ಸ್ಪರ್ಧೆ: ಗೆದ್ದ ವಿದ್ಯಾರ್ಥಿಗಳಿಗೆ ನಾಸಾಗೆ ತೆರಳುವ ಅವಕಾಶ

Srinivas Rao BV

ಅಂತರಿಕ್ಷ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಐಐಟಿ ಗುವಾಹಟಿ ನಾಸಾಗೆ ಭೇಟಿ ನೀಡುವ ಅವಕಾಶ ಒದಗಿಸಿದೆ.

ಐಐಟಿ ಗುವಾಹಟಿಯ ಟೆಕ್ನೋ-ಮ್ಯಾನೇಜ್ಮೆಂಟ್ ಫೆಸ್ಟಿವಲ್ ಭಾಗವಾಗಿ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಶ್ನೆ ಪತ್ರಿಕೆ ರೂಪದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ನಾಸಾ ಭೇಟಿಯ ಅವಕಾಶವನ್ನು ಐಐಟಿ ಗುವಾಹಟಿ ಒದಗಿಸಲಿದೆ.

ಟೆಕ್ನಾಥ್ಲೊನ್ ಹೆಸರಿನ ಸ್ಪರ್ಧೆ ಜು.17 ರಿಂದ ನಡೆಯಲಿದ್ದು ಜೂನಿಯರ್ ಸ್ಕ್ವಾಡ್ (9-10 ತರಗತಿ) ಹೌಟ್ಸ್ ಸ್ಕ್ವಾಡ್ (11-12 ತರಗತಿ)ಯ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಫೈನಲ್ ಗೆ ಆಯ್ಕೆಯಾಗುವ ಎರಡು ವಿಭಾಗಗಳ ವಿದ್ಯಾರ್ಥಿಗಳನ್ನು ಸೆ.1 ರಿಂದ 4 ವರೆಗೆ ನಡೆಯಲಿರುವ ಐಐಟಿ ಗುವಾಹಟಿಯಲ್ಲಿ ನಡೆಯಲಿರುವ ಟೆಕ್ನೋ ಮ್ಯಾನೇಜ್ಮೆಂಟ್ ಫೆಸ್ಟಿವಲ್ ಗೆ ಆಹ್ವಾನಿಸಲಾಗುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಸವಾಲಿನ ಪರೀಕ್ಷೆ ನೀಡಲಾಗುತ್ತದೆ. ಅಂತಿಮವಾಗಿ ಗೆದ್ದ ವಿದ್ಯಾರ್ಥಿಗಳಿಗೆ ನಾಸಾ ಎಎಂಇ ಎಸ್ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗುತ್ತದೆ.
 
ನಾಸಾಗೆ ಕಳಿಸುವುದರೊಂದಿಗೆ ಎರಡೂ ವಿಭಾಗಗಳ ಗೆದ್ದ ವಿದ್ಯಾರ್ಥಿಗಳಿಗೆ ಹಲವು ಬಹುಮಾನವನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತಮ್ಮ ಶಾಲೆಗೆ ಐಐಟಿ ಗುವಾಹಟಿ ತಂಡ ಭೇಟಿ ನೀಡಿದಾಗ 100 ರೂ ನೀಡಿ ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. technothlon.techniche.org ಮೂಲಕವೂ ನೋಂದಣಿ ಮಾಡಿಕೊಳ್ಳುವ ಅವಕಾಶ ಇದೆ.

SCROLL FOR NEXT