ನವದೆಹಲಿ: ನೀವು ನಿತ್ಯ ಕಳುಹಿಸುವ ವಾಟ್ಸ ಆಪ್ ಸಂದೇಶಗಳು ಮೂರನೇ ವ್ಯಕ್ತಿಗೆ ದೊರೆಯದಂತೆ ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ವ್ಯವಸ್ಥೆ ಮಾಡಲಾಗಿದೆ. ಆದರೂ ಮೂಲ ಸಂದೇಶಗಳನ್ನು ಡಿಲೀಟ್ ಮಾಡಲು ಸಾಧ್ಯವೆ ಇಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ಈ ಆಪ್ ನೀಡುವ ಖಾಸಗೀತನ ಹಾಗೂ ಸಂದೇಶಗು ಬೇರೆಡೆ ಸೇವ್ ಆಗುವುದಿಲ್ಲ ಎನ್ನುವ ಬಗ್ಗೆ ಭದ್ರತಾ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಕೆದಾರರು ಡಿಲೀಟ್ ಬಟನ್ ಒತ್ತಿದರೂ, ಇದರಲ್ಲಿ ಕಳುಹಿಸಿದ ಸಂದೇಶಗಳು ಡಿಲೀಟ್ ಆಗುವುದೇ ಇಲ್ಲವೆಂದು ಆಪಲ್ ನ ಐಒಎಸ್ ಭದ್ರತಾ ತಜ್ಞರಾದ ಜೋನಾಥನ್ ಝಿಯಾರಿಸ್ಕಿ ಅವರು ಹೇಳಿದ್ದಾರೆ.
ನೀವು ಎಲ್ಲಾ ಚಾಟ್ ಸಂದೇಶಗಳನ್ನು ಡಿಲೀಟ್, ಕ್ಲಿಯರ್ ಅಥವಾ ಆರ್ಕೈವ್ ಮಾಡಿದ ನಂತರವೂ ಮೂಲ ಸಂದೇಶಗಳು ಹಾಗೆಯೇ ಉಳಿದುಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ. ಆದರೆ ಫೋನ್ ನಿಂದಲೇ ವಾಟ್ಸ್ ಆಪ್ ಅನ್ನು ತೆಗೆದು ಹಾಕಿದರೆ ಮಾತ್ರ ಸಂದೇಶಗಳು ಸಂಪೂರ್ಣವಾಗಿ ಅಳಿಸಿಹೋಗುತ್ತವೆ ಎಂದಿದ್ದಾರೆ.
ಸಂದೇಶಗಳು ಡಿಲೀಟ್ ಆಗದಿದ್ದರೆ ಹೆಚ್ಚಿನ ಅನಾಹುತವಾಗುವ ಸಾಧ್ಯತೆ ಇಲ್ಲವಾದರೂ ಸಂದೇಶಗಳನ್ನೂ ಸಂಪೂರ್ಣವಾಗಿ ಅಳಿಸುವುದು ಸಾಧ್ಯವಿಲ್ಲ ಎಂಬುದನ್ನು ಬಳಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.