ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ನಿಂದ 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಮೆಸೇಜ್ ಓದಬಲ್ಲ ಕೃತಕ ಬುದ್ಧಿಮತ್ತೆ ಅಭಿವೃದ್ಧಿ

Srinivas Rao BV

ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್, 20 ಕ್ಕೂ ಹೆಚ್ಚು ಭಾಷೆಗಳನ್ನು ಗ್ರಹಿಸಿ ಮಾನವರಂತೆಯೇ ಮೆಸೇಜ್, ಪೋಸ್ಟ್ ಗಳನ್ನು ಓದಬಲ್ಲ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಿದೆ.
ಫೇಸ್ ಬುಕ್ ಅಭಿವೃದ್ಧಿಪಡಿಸಿರುವ ಕೃತಕಬುದ್ಧಿಮತ್ತೆ ಹೊಂದಿರುವ ಕಂಪ್ಯೂಟರ್ ಒಂದು ಕ್ಷಣದಲ್ಲಿ ಹಲವಾರು ಪೋಸ್ಟ್ ಗಳನ್ನು ಓದುವ ಸಾಮರ್ಥ್ಯ ಹೊಂದಿದೆ ಎಂದು ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ. ಫೇಸ್ ಬುಕ್ ಬಳಕೆದಾರರು ಅಲ್ಲಿರುವ ವಿಷಯವನ್ನು ಹೆಚ್ಚು ಓದುವುದರ ಬಗ್ಗೆ ಹಾಗೂ ಬೇಡವಾದ ವಿಷಯಗಳನ್ನು ತೆಗೆದುಹಾಕುವುದು ಸೇರಿದಂತೆ ಫೇಸ್ ಬುಕ್ ನ ಉತ್ಪನ್ನಗಳ ಬಗ್ಗೆ ಬಳಕೆದಾರರ ಅನುಭವವನ್ನು ತಿಳಿದುಕೊಳ್ಳಲು ಈ ಕೃತಕ ಬುದ್ಧಿಮತ್ತೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಫೇಸ್ ಬುಕ್ ನ ಮೆಸೆಂಜರ್ ನಲ್ಲಿ ಈ ಕೃತಕ ಬುದ್ಧಿಮತ್ತೆಯನ್ನು ಪರೀಕ್ಷಾರ್ಥ ಪ್ರಯೋಗ ಮಾಡಲಾಗುತ್ತಿದೆ.

SCROLL FOR NEXT