ವಿಜ್ಞಾನ-ತಂತ್ರಜ್ಞಾನ

ಗಿರ್ ತಳಿಯ ಗೋವುಗಳ ಮೂತ್ರದಲ್ಲಿ 'ಚಿನ್ನ': ಜುನಗಢ್ ಕೃಷಿ ವಿವಿ ಸಂಶೋಧನೆ

Srinivas Rao BV

ಜುನಗಢ್: ಗೋವನ್ನು ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನು ಎಂದೆಲ್ಲಾ ಬಣ್ಣಿಸಿರುವುದನ್ನು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಜುನಗಢ್ ಕೃಷಿ ವಿವಿಯ ಸಂಶೋಧಕರು ಗಿರ್ ಎಂಬ ತಳಿಯ ಹಸುಗಳಲ್ಲಿ ಇಂತಹ ಗುಣಗಳಲ್ಲಿ ಒಂದನ್ನು ಕಂಡುಕೊಂಡಿದ್ದು, ಗಿರ್ ತಳಿಯ ಗೋವುಗಳ ಮೂತ್ರದಲ್ಲಿ ಚಿನ್ನದ ಅಂಶ ಇರುವುದನ್ನು ಪತ್ತೆ ಮಾಡಿದ್ದಾರೆ.

ಸುಮಾರು 400 ಗಿರ್ ತಳಿಗಳ ಮೂತ್ರದ ಮಾದರಿಯನ್ನು ಪರೀಕ್ಷೆಗೊಳಪಡಿಸಿರುವ ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರು, ಒಂದು ಲೀಟರ್ ಗೋಮೂತ್ರದಲ್ಲಿ ಸುಮಾರು 3 ಎಂ ಜಿ ಯಿಂದ 10 ಎಂ ಜಿ ವರೆಗಿನ ಚಿನ್ನದ ಅಂಶವನ್ನು ಪತ್ತೆ ಮಾಡಿದ್ದಾರೆ. ಗೋಮೂತ್ರದಲ್ಲಿ ಚಿನ್ನದ ಅಂಶ ಅಯಾನಿಕ್ ರೂಪದಲ್ಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಭಾರತದ ಪುರಾತನ ಗ್ರಂಥಗಳಲ್ಲಿ ಗೋವಿನ ಮೂತ್ರದಲ್ಲಿ ಚಿನ್ನ, ಔಷಧಗಳ ಅಂಶವಿರುವ ಬಗ್ಗೆ ಉಲ್ಲೇಖಗಳಿವೆಯಾದರು, ಈ ವರೆಗೂ ಅದನ್ನು ನಿರೂಪಿಸುವಂತಹ ಸಂಶೋಧನೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಜುನಗಢ್ ಕೃಷಿ ವಿವಿಯ ಬಯೊಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಬಿಎ ಗೋಲಕಿಯ ನೇತೃತ್ವದ ತಂಡ ಈ ಸಂಶೋಧನೆ ಮಾಡಿದ್ದು ಸುಮಾರು 400 ಕ್ಕೂ ಹೆಚ್ಚು ಮೂತ್ರದ ಮಾದರಿಯನ್ನು ಸಂಶೋಧನೆಗೆ ಒಳಪಡಿಸಿದ್ದಾರೆ.  

ಗೋಮೂತ್ರದಿಂದ ಚಿನ್ನದ ಅಂಶವನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೊರತೆಗೆಯಬಹುದು ಎಂದು ಡಾ. ಬಿಎ ಗೋಲಕಿಯ ಮಾಹಿತಿ ನೀಡಿದ್ದಾರೆ. ಗೋವಿನ ಮೂತ್ರ ಮಾತ್ರವಲ್ಲದೆ ಒಂಟೆ, ಎಮ್ಮೆ, ಕುರಿ, ಅದು ಸೇರಿದಂತೆ ಹಲವು ಪ್ರಾಣಿಗಳ ಮೂತ್ರಗಳನ್ನು ಸಂಶೋಧನೆಗೆ ಒಳಪಡಿಸಿದ್ದಾರೆ, ಆದರೆ ಇದರಲ್ಲಿ ಗೋವಿನ ಮೂತ್ರದಲ್ಲಿರುವಂತೆ ಪ್ರತಿಜೀವಕ ಅಂಶಗಳು ಪತ್ತೆಯಾಗಿಲ್ಲ ಎಂದು ಸಂಶೋಧನಾ ತಂಡ ತಿಳಿಸಿದೆ.

SCROLL FOR NEXT