ವಿಜ್ಞಾನ-ತಂತ್ರಜ್ಞಾನ

ಭಾರತ-ಇಸ್ರೇಲ್ ತಯಾರಿಕೆಯ ಖಂಡಾಂತರ ಕ್ಷಿಪಣಿ ಉಡಾವಣೆ ಯಶಸ್ವಿ

Srinivas Rao BV

ಬಾಲಾಸೋರ್: ಭಾರತ- ಇಸ್ರೇಲ್ ದೇಶಗಳು ಜಂಟಿ ಸಂಶೋಧನೆಯಿಂದ ತಯಾರಿಸಿದ್ದ ಖಂಡಾಂತರ ಕ್ಷಿಪಣಿಯನ್ನು ಭಾರತ ಜೂ.30 ರಂದು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ.

ಒಡಿಶಾದ ಬಾಲಾಸೋರ್ ನಿಂದ 15 ಕಿ.ಮೀ ದೂರದಲ್ಲಿರುವ ಚಾಂಡಿಪುರದಲ್ಲಿರುವ ಐಟಿಆರ್ ನಲ್ಲಿ ಕ್ಷಿಪಣಿಯನ್ನು ಉಡಾವಣೆ ನಡೆಸಲಾಗಿದೆ. ಇನ್ನು ಹೆಸರಿದ ಈ ಕ್ಷಿಪಣಿಯ ಬಹು ಉದ್ದೇಶಿತ ಕ್ಷಿಪಣಿಯಾಗಿದ್ದು, ಭೂಮಿಯಿಂದ ಭೂಮಿಗೆ ಹಾರುವ ಸಾಮರ್ಥ್ಯಹೊಂದಿದೆ.

ಅಂತೆಯೇ ಬಹುಕಾರ್ಯ ಕಣ್ಗಾವಲು ವ್ಯವಸ್ಥೆ ಈ ಕ್ಷಿಪಣಿಯ ವಿಶೇಷತೆಯಾಗಿದ್ದು, ರಾಡಾರ್ ನೀಡುವ ಎಚ್ಚರಿಕೆ ಸಂದೇಶವನ್ನು ಸ್ವೀಕರಿಸಿ ಬಳಿಕ ಶತೃ ಪಾಳಯದ ಮೇಲೆ ದಾಳಿ ಮಾಡಲಿದೆ. ಈ ಹಿಂದೆ ಭಾರತ ಮತ್ತು ಇಸ್ರೇಲ್ ಸರ್ಕಾರಗಳು ಮಾಡಿಕೊಂಡಿದ್ದ ಜಂಟೀ ಒಪ್ಪಂದದಂತೆ ಭಾರತದಲ್ಲಿ ಈ ಕ್ಷಿಪಣಿ ತಯಾರಿಗಿದ್ದು, ಭಾರತದ ಡಿಆರ್ ಡಿಒ ಮತ್ತು ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀ ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಈ ಕ್ಷಿಪಣಿ ತಯಾರಾಗಿದೆ.

ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಗೆ ಸಿದ್ಧತೆ ನಡೆಸಿದ್ದ ಬಾಲಾಸೋರ್ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕ್ಷಿಪಣಿ ಉಡಾವಣೆಯಾಗಲಿದ್ದ ಪ್ರದೇಶದಿಂದ 2.5 ಕಿಮಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ 3,652 ಜನರನ್ನು ಸ್ಥಳಾಂತರಗೊಳಿಸಿ, ಕ್ಷಿಪಣಿ ಉಡಾವಣೆ ವೇಳೆ ಕಡಲ ತೀರದ ಜಿಲ್ಲೆಗಳಾದ ಬಾಲಾಸೋರ್, ಭದ್ರಕ್, ಕೇಂದ್ರಪಾದಗಳಲ್ಲಿ  ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿತ್ತು.

SCROLL FOR NEXT